ಬಂಟ್ವಾಳ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಒಂಭತ್ತು ಲಾರಿಗಳನ್ನು ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾಯರ್ಾಚರಣೆ ನಡೆಸಿ ಬುಧವಾರ ರಾತ್ರಿ ಮೆಲ್ಕಾರ್ ಬಳಿ ವಶಪಡಿಸಿಕೊಂಡಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ ಎಂದು ಎಎಸ್ಪಿಯವರಿಗೆ ಬಂದ ಖಚಿತ ಮಾಹಿತಿಯಂತೆ ಕಾರ್ಯಚರಣೆ ನಡೆಸಿದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳು ಸಿಕ್ಕಿ ಬಿದ್ದಿದೆ. 30 ಲಾರಿಗಳಲ್ಲಿ ಮರಳು ಸಾಗಾಟ ಮಾಡಲಾಗಿತ್ತಿದೆ ಎನ್ನುವ ಮಾಹಿತಿ ದೊರಕಿದ್ದರೂ ಪೊಲೀಸರು ಒಂಭತ್ತು ಲಾರಿಗಳನ್ನು ಮಾತ್ರ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಉಳಿದ ಲಾರಿಗಳು ಕಾರ್ಯಚರಣೆಯ ಮಾಹಿತಿ ಪಡೆದು ಬೇರೆ ರಸ್ತೆಯಲ್ಲಿ ಸಂಚರಿಸಿರ ಬಹುದು ಎನ್ನುವ ಗುಮಾನಿಯಿಂದ ಎಸ್ಪಿಯವರು ಫರಂಗಿಪೇಟೆಗೂ ತೆರಳಿ ಕಾರ್ಯಚರಣೆ ಮುಂದುವರೆಸಿರುವುದಾಗಿ ತಿಳಿದು ಬಂದಿದೆ. ದಾಳಿ ಕಾರ್ಯಚರಣೆಯಲ್ಲಿ ಎಎಸ್ಪಿ ಅವರೊಂದಿಗೆ ವೃತ್ತ ನಿರೀಕ್ಷಕ ಬೆಳಿಯಪ್ಪ, ಬಂಟ್ವಾಳ ನಗರ ಠಾಣ ಎಸೈ ನಂದ ಕುಮಾರ್, ಗ್ರಾಮಾಂತರ ಠಾಣೆ ಎಸೈ ನಾಗಾರಾಜ್, ವಿಟ್ಲ ಠಾಣೆ ಎಸೈ ರಾಘವೇಂದ್ರ ಟಿ.ಆರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.


