ಅಂದು ಭಾರತಮಾತೆಯ ಮುಕುಟ ,ಚಿನ್ನದ ಕಾಶ್ಮೀರ ಮಣ್ಣಿನಲ್ಲಿ ಹುದುಗಿತ್ತು. ಆದರೆಇಂದುಅದೇಕಿರೀಟವನ್ನುಕೈಗೆತ್ತಿತುಕ್ಕು ಬಿಡಿಸಿ ಹೊಳೆಯುವಂತೆ ಮಾಡಿದ ಪುಣ್ಯ ಪುರುಷ ನಮ್ಮ ಪ್ರಧಾನಿಯಾಗಿರುವುದು ನಮ್ಮ ಪುಣ್ಯ.ಆದ್ದರಿಂದ ಈ ವರ್ಷ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ, ಎಂದುಜಿಲ್ಲಾ ಮಟ್ಟದರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಲೋಕಯ್ಯರವರು ಮಾತನಾಡಿದರು.
ಇವರು ಶ್ರೀರಾಮ ಪ್ರೌಢಶಾಲೆಯ ಸ್ವಾತಂತ್ರ್ಯ ದಿನಾಚರಣೆ,ರಕ್ಷಾಬಂಧನ ಹಾಗೂ ಸಂಸ್ಕøತೋತ್ಸವಕಾರ್ಯಕ್ರಮದಲ್ಲಿಅತಿಥಿಯಾಗಿ ಮಾತನಾಡಿರಕ್ಷಾಬಂಧನ ದಿನವೆನ್ನುವುದು ದಿನಾಚರಣೆಯಲ್ಲ, ಅದು ಸಂಸ್ಕøತಿಯಆಚರಣೆ, ಶಕ್ತಿಯ ಬದಲುಯುಕ್ತಿಯನ್ನು ಬಳಸಿ ಸಮಾಜದಗಂಡಾಂತರವನ್ನು ಹೋಗಲಾಡಿಸುವ ನೀತಿಯನ್ನು ಸಾರುವುದೇರಕ್ಷಾಬಂಧನಎಂದರು.ಕಾರ್ಯಕ್ರಮದಲ್ಲಿ ಸಂಸ್ಕøತೋತ್ಸವಕಾರ್ಯಕ್ರಮದ ಬಗ್ಗೆ ಶ್ರೀರಾಮ ಪದವಿ ವಿಭಾಗದ ಸಂಸ್ಕøತಉಪನ್ಯಾಸಕರಾದ ಲತಾ ಮಾತಾಜಿಯವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾÀಂಸ್ಕøತಿಕಕಾರ್ಯಕ್ರಮ ನಡೆಯಿತು.ಅತಿಥಿ ಗಳಿಗೆ ಶಾಲಾ ಸಂಸತ್ತಿನ ನಾಯಕರುರಕ್ಷೆಕಟ್ಟಿದರು, ವಿದ್ಯಾರ್ಥಿಗಳು ಪರಸ್ಪರರಕ್ಷಾಬಂಧನಕಟ್ಟಿ ಬಾಂಧವ್ಯ ಬೆಸೆದರು.ಕಾರ್ಯಕ್ರಮದಲ್ಲಿರುಕ್ಮಯ ಕೆಳಕೇರಿ, ಸಿದ್ಧಿದೇವತಾ ಆರಾಧಕರ ಸಂಘದ ಪ್ರಮುಖರಾದಕೊರಗಪ್ಪ ಪಂಡಿತ್ , ಪ್ರೇಮ್ ಬೊಂಡಾಲ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತಮಾಧವ, ಸಹಸಂಚಾಲಕರಾದರಮೇಶ್ಎನ್. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ವಸಂತಿಕುಮಾರಿ, ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಕ್ಷಾಬಂಧನದ ಮಹತ್ವವನ್ನು ವಂಶಿ ತಿಳಿಸಿದರು,ಕಾರ್ಯಕ್ರಮವನ್ನು ಸಮೀಕ್ಷಾ ಸ್ವಾಗತಿಸಿ, ಆದಿತ್ಯ ಮೈಥಿಲಿ ವಂದಿಸಿ ಸೌಭಾಗ್ಯ ನಿರೂಪಿಸಿದರು.
