ಇಷ್ಟೊಂದು ಬೃಹತ್ ಮೊತ್ತವನ್ನು ಕನಸಿನಲ್ಲೂ ಕಂಡಿರಲಿಲ್ಲ: ದಿನೇಶ್ ಕಾತರ್ಿಕ್
ಬೆಂಗಳೂರು: ಯಾರ ಅದೃಷ್ಟ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಂದು ಬಡವನಿದ್ದವ ನಾಳೆ ಏಕಾಏಕಿ ಶ್ರೀಮಂತನಾಗಬಹುದು. ಐಪಿಎಲ್ ಎಂಬ ಮ್ಯಾಜಿಕ್ ಬಾಕ್ಸ್ ಕೂಡಾ ಅಂಥಹುದೇ ಚಮತ್ಕಾರಗಳನ್ನು ಕ್ರಿಕೆಟರ್ಗಳ ಜೀವನದಲ್ಲಿ ಮಾಡುತ್ತಿದೆ.
ಔಟ್ ಆಫ್ ಫಾಮರ್್ನಲ್ಲಿರುವ ಯುವರಾಜ್ ಸಿಂಗ್ನನ್ನು ಬೆಂಗಳೂರು ತಂಡ 14 ಕೋಟಿ ರೂ, ನೀಡಿ ಖರೀದಿಸಿದರೆ, ಟೀಂ ಇಂಡಿಯಾದಿಂದ ಹೊರಗುಳಿದು ತನ್ನ ಸರದಿಗಾಗಿ ಕಾಯುತ್ತಿದ್ದ ಮತ್ತೊರ್ವ ಆಟಗಾರ ದಿನೇಶ್ ಕಾತರ್ಿಕ್ ಕೂಡಾ 12.5 ಕೋಟಿ ರೂ,ಗೆ ಡೆಲ್ಲಿ ಡೇರ್ಡೆವಿಲ್ಸ್ ಪಾಲಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಅಚ್ಚರಿ ಕೇವಲ ಕ್ರಿಕೆಟ್ ಪಂಡಿತರಿಗಷ್ಟೇ ಸೀಮಿತವಾಗಿಲ್ಲ ಸ್ವಯಂ ಕಾತರ್ಿಕ್ ಕೂಡಾ ಈ ಬಗ್ಗೆ ಆಶ್ಚರ್ಯ ಚಕಿತರಾಗಿದ್ದಾರೆ. ಆದರೆ ಈ ಮಾತನ್ನು ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ಅಷ್ಟೇ ಪ್ರಾಮಾಣಿಕತೆಯಿಂದ ಒಪ್ಪುತ್ತಾರೆ ಕೂಡಾ. ಇಷ್ಟೊಂದು ಬೃಹತ್ ಮೊತ್ತಕ್ಕೆ ನಾನು ಖರೀದಿಸಲ್ಪಡುತ್ತೇನೆ ಎಂದು ಯೋಚಿಸಿಯೇ ಇರಲಿಲ್ಲ. ಇದು ನನಗೆ ಮೊದಲ ಅನುಭವ ಹಾಗಾಗಿ ಆಟದ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಇನ್ನಷ್ಟೇ ತಿಳಿಯಬೇಕು ಎಂದು ಕಾತರ್ಿಕ್ ಹೇಳಿದ್ದಾರೆ. ತಂಡ ನನ್ನನ್ನು ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿಸಿರುವ ಕಾರಣ ಆಟದಲ್ಲಿ ಶೇಕಡಾ ನೂರು ಪ್ರದರ್ಶನ ನೀಡುತ್ತೇನೆ. ಕ್ರಿಕೆಟನ್ನು ಕೇವಲ ಹಣಕ್ಕಾಗಿ ನಾನು ಆಡುತ್ತಿಲ್ಲ ಹಾಗಾಗಿ ಹಣ ಎಷ್ಟೇ ಆದರೂ ಸಮರ್ಥವಾಗಿ ಆಡಿ ತಂಡವನ್ನು ಗೆಲ್ಲಿಸುವುದು ನನ್ನ ಮೊದಲ ಆದ್ಯತೆ ಎಂದು ಕಾತರ್ಿಕ್ ತಿಳಿಸಿದ್ದಾರೆ.
