ಏರುತ್ತಿರುವ ತಾಪಮಾನ, ಮಳೆಯ ಕಣ್ಣುಮುಚ್ಚಾಲೆಯಾಟ, ವಿಷವಾಗುತ್ತಿರುವ ಗಾಳಿ ಎಲ್ಲವೂ ಮಾನವ ನಿರ್ಮಿತ ಸಮಸ್ಯೆಗಳಾಗಿವೆ. ಈ ನಿಟ್ಟಿನಲ್ಲಿ ಗಿಡಗಳನ್ನು ನೆಡುವುದು ಹಾಗೂ ಆಸಕ್ತರಿಗೆ ಸಸಿ ವಿತರಣೆ ಮಾಡುವುದುಅಭಿನಂದನೀಯಕಾರ್ಯಕ್ರಮಎಂದು ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಶ್ಲಾಘಿಸಿದರು.
ಶ್ರೀ ಅರ್ಕುಳ ಬೀಡು ವಜ್ರನಾಭ ಶೆಟ್ಟಿಅವರುಇತ್ತೀಚೆಗೆಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿದೈವಸ್ಥಾನದಆವರಣದಲ್ಲಿ ಅರ್ಕುಳ ಟೀಂ ವೀರಾಂಜನೇಯತಂಡವುಅರ್ಕುಳ ಚಾರಿಟೇಬಲ್ ಟ್ರಸ್ಟ್ಆಶ್ರಯದಲ್ಲಿಆಯೋಜಿತವಾದವೃಕ್ಷಾರೋಪಣಅಭಿಯಾನವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.ಉಜಿರೆಯ ಶ್ರೀ ಧ.ಮಂ.ಕಾಲೇಜಿನಅರ್ಥಶಾಸ್ತ್ರ ಪ್ರಾಧ್ಯಾಪಕಡಾ.ಎ.ಜಯಕುಮಾರ ಶೆಟ್ಟಿಅವರು ಮಾತನಾಡುತ್ತಾಸಹ್ಯ ಬದುಕಿಗಾಗಿ ನಾವು ಜಾಗೃತರಾಗಿ ಪರಿಸರ ಸಂವರ್ಧನೆ ಮಾಡಬೇಕಾದ ಅನಿವಾರ್ಯತೆಇದೆ.
ನಾವಿಂದು ವನಮಹೋತ್ಸವವನ್ನುಅರ್ಥಪೂರ್ಣವಾಗಿಸಲುದೈನಂದಿನ ಜೀವನದಲ್ಲಿ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು.ನಿಸರ್ಗದಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಅದರ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯಜ್ಞಾನತಾನಾಗಿಯೇ ಬೆಳೆಯುತ್ತದೆಎಂದುಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿಅರ್ಕುಳ ಚಾರಿಟೇಬಲ್ ಟ್ರಸ್ಟ್ನಿರ್ದೇಶಕ ಅರ್ಕುಳ ಬೀಡುರತ್ನರಾಜ ಶೆಟ್ಟಿ,ಕಂಪ ಸದಾನಂದ ಆಳ್ವ ಪರಿಸರಕಾರ್ಯಕರ್ತ ಮಾಧವ ಉಳ್ಳಾಲ್,ತುಪ್ಪೆಕಲ್ಲು ಉಮೇಶ ಸೇಮಿತ, ಅರ್ಕುಳ ಬೀಡುಅಜಿತ್ಕುಮಾರ್ ಶೆಟ್ಟಿ,ಟೀಂ ವೀರಾಂಜನೇಯತಂಡದ ನಾಯಕ ಅರ್ಕುಳ ಪ್ರಮೋದ್ಕರ್ಕೇರಾ,ಅಡ್ಯಾರ್ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ತುಪ್ಪೆಕಲ್ಲು, ಶ್ರೀಮತಿ ಪವಿತ್ರಾ,ಮನೋಜ್ತುಪ್ಪೆಕಲ್ಲು, ಮಂಟಮೆ ಸೇಸಪ್ಪಕರ್ಕೇರಾ,ಹಾಗೂ ಅರ್ಕುಳ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಸ್ವಸಹಾಯ ಗುಂಪುಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಆಶಾ ಹಾಗೂ ಪದ್ಮಾವತಿ ನಿರ್ವಹಿಸಿದ ಕಾರ್ಯಕ್ರಮದಲ್ಲಿಅರ್ಕುಳ ಚಾರಿಟೇಬಲ್ ಟ್ರಸ್ಟ್ ಮೇಲ್ವಿಚಾರಕ ಮಂಟಮೆ ದಿನಕರಕರ್ಕೇರಾ ಸ್ವಾಗತಿಸಿ ಶೋಭಾ ವಂದಿಸಿದರು.

