ಬಂಟ್ವಾಳ : ಜಮ್ಮು ಕಾಶ್ಮೀರದಲ್ಲಿ 370 ಮತ್ತು 35(ಎ) ವಿಧಿಯನ್ನು ರದ್ದುಗೊಳಿಸಿರುವುದನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸ್ವಾಗತಿಸಿದ್ದಾರೆ.
ಇನ್ನು ಮುಂದೆ ಭಾರತದ ಸಂವಿಧಾನ ಕಾಶ್ಮೀರಕ್ಕೆ ಅನ್ವಯವಾಗುತ್ತದೆ.ಅಂದಿನ ನಾಯಕರು ಯಾವ ಉದ್ದೇಶದಿಂದ ಪಕ್ಷವನ್ನು ಕಟ್ಟಿದ್ದಾರೋ ಅದು ಈ ದಿನ ನೆರವೇರಿದೆ ಇದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ ಎಂದು ಅವರು ತಿಳಿಸಿದರು. 
ನೆಹರೂರವರ ಸಚಿವ ಸಂಪುಟದದಲ್ಲಿ ಕೈಗಾರಿಕಾ ಮಂತ್ರಿಯನ್ನು ತ್ಯಜಿಸಿ ಹೊರ ಬಂದ ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಚಿಂತನೆ ಕನಸು ಈಗ ಈಡೇರಿದೆ.ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಬೇಕು ಎಂಬ ಮಹತ್ವದ ನಿರ್ಧಾರ ದ ಮೂಲಕ “ಏಕ್ ದೇಶ್ ದೋ ವಿಧಾನ್ ದೋ ಪ್ರಧಾನ್ ದೋ ನಿಶಾನ್ ನಹಿ ಚಲೇಗೆ ನಹಿ ಚಲೇಗೆ” ಎಂಬ ಘೋಷಣೆಯೊಂದಿಗೆ ಅಂದಿನ ಕಾಲದಲ್ಲಿ ಕಾಂಗ್ರೇಸ್ ಪಕ್ಷದಿಂದ ಹೊರಬಂದು ಜನಸಂಘ ಎಂಬ ಪಕ್ಷವನ್ನು ಕಟ್ಟಿ ದ ಅವರ ಕನಸಿಗೆ ಸಕಾರ ನೀಡಿದ ಕಾಶ್ಮೀರದ ವಿಶೇಷ ಅಧಿಕಾರ ರದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ಅವಧಿಯಲ್ಲಿ ನಾನು ಶಾಸಕನಾಗಿರುವುದು ಕೂಡ ಅತ್ಯಂತ ಸಂತಸದ ಕ್ಷಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇತಿಹಾಸ ನಿರ್ಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ , ಗೃಹ ಸಚಿವ ಅಮಿತ್ ಶಾ ಮತ್ತು ಸಂಪುಟದ ಮಂತ್ರಿ ಹಾಗೂ ಸಂಸದರಿಗೆ ಶಾಸಕ ರಾಜೇಶ್ ನಾಯ್ಕ್ ಅಭಿನಂದಿಸಿದ್ದಾರೆ.
