ಕೋಲಾರ : ನಗರದಲ್ಲದೆ ದೇಶದ 2000 ಕ್ಕೆ ಮೇಲ್ಪಟ್ಟು ಕ್ಲಬ್‍ಗಳಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಇದಕ್ಕಾಗಿ ವಾಸವಿ ಕ್ಲಬ್‍ನಿಂದ ಹಲವಾರು ಕೋಟಿ ರೂಪಾಯಿಗಳನ್ನು ಖರ್ಚುಮಾಡುತ್ತಿದೆ. ಕೇವಲ ಶಾಲೆಗಳಿಗಲ್ಲದೆ ವೃದ್ಧಾಶ್ರಮ, ಅಂಗವಿಕಲ ಆಶ್ರಮ, ಆಸ್ಪತ್ರೆ, ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ ಎಲ್ಲಾ ವರ್ಗದ ಜನರಿಗೂ ಆರ್ಥಿಕ ಮತ್ತು ಸಾಮಾಜಿಕ ಸೇವೆಯನ್ನು ವಾಸವಿ ಕ್ಲಬ್ ಮಾಡುತ್ತಿದೆ ಎಂದು ಅಂತರಾಷ್ಟ್ರೀಯ ಉಪಾಧ್ಯಕ್ಷ ಡಾ|| ಎ.ಎಸ್.ರಾಮಲಿಂಗಗುಪ್ತ ತಿಳಿಸಿದರು.

vasavi club

ವಾಸವಿ ಕ್ಲಬ್‍ನ ಪ್ರತಿಷ್ಠೆಯ ಸಮಾಜ ಸೇವೆಯಾದ ‘ಡಾನ್ ಟೂ ಡೆಸ್ಕ್’ ನಾಮದ ಅಡಿಯಲ್ಲಿ ಜುಲೈ 26ರ ಶುಕ್ರವಾರ ಪಿ.ಸಿ. ಬಡಾವಣೆ ಹಾಗೂ ಕಮಲಾ ಮಹಡಿ ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೂ ನೋಟ್ ಬುಕ್ ಕಲಿಕಾ ಸಾಮಗ್ರಿಗಳು ಜೊತೆಯಲ್ಲಿ ತಿಂಡಿ, ನಿಘಂಟನ್ನು ನೀಡುವ ಕಾರ್ಯಕ್ರಮಕ್ಕೆ ಉದ್ಘಾಟಿಸಿ ಮಾತನಾಡಿದರು.ಸಂಸ್ಥೆಯ ವಲಯ ಅಧಿಕಾರಿ ಹಾಗೂ ಕಾರ್ಯದರ್ಶಿ ಬಿ.ಪಿ. ಓಂಪ್ರಕಾಶ್ ಮಾತನಾಡಿ ಸಮಾಜದಲ್ಲಿ ಅನೇಕ ಸಂಘ ಸಂಸ್ಥೆಯಲ್ಲಿ ಸಮಾಜ ಸೇವೆ ಮಾಡುತ್ತಿದ್ದರೂ, ವಾಸವಿ ಕ್ಲಬ್‍ನ ಸಮಾಜ ಸೇವೆಯು ವಿಶಿಷ್ಠ ರೀತಿಯಲ್ಲಿ ನೀಡುತ್ತಾ ಬಂದಿದೆ. ಸಮಾಜದ ಕಟ್ಟ ಕಡೆಯ ಬಡವನಿಗೂ ಹಾಗೂ ಬಡ ಶಾಲಾ ಮಕ್ಕಳಿಗೂ ಸಮಾಜ ಸೇವೆಯನ್ನು ನಿರಂತರವಾಗಿ 1970ರಿಂದ ಇದುವರೆಗೂ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.vasavi club1

ಪಿ.ಸಿ. ಬಡಾವಣೆಯ ಸರ್ಕಾರಿ ಶಾಲಾ ಸಹ ಶಿಕ್ಷಕಿ ಪದ್ಮವತಿ ಸಮಾಜ ಸೇವೆಯಲ್ಲಿ ವಾಸವಿ ಕ್ಲಬ್‍ನವರು ಅಪಾರ ಸೇವೆ ಮಾಡುತ್ತಿದ್ದು ಹಾಗೂ ನಮ್ಮ ಶಾಲೆಗೆ ಪ್ರತಿವರ್ಷವೂ ಕಲಿಕಾ ಸಾಮಗ್ರಿಗಳಲ್ಲದೆ ಅನೇಕ ಶಾಲೆಯ ಉಪಯೋಗಿಕ ಸಾಮಾಗ್ರಿಗಳನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.ವಿ.ಪಿ.ಸೋಮಶೇಖರ್, ಉಮಾಮೂರ್ತಿ, ಡಿ.ಜೆ.ಮನೋಹರ್, ಪದ್ಮಾ ಮನೋಹರ್, ಮುನಿರಾಜು, ಮಂಜುಳ, ರಾಘವೇಂದ್ರ ಬಾಲಾಜಿ, ರಶ್ಮಿ, ಪದ್ಮಾವತಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತಯನ್ನು ವಾಸವಿಯನ್ನು ಬಿ.ಆರ್. ಅಮರ್‍ನಾಥ್‍ರವರು ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *