ಶ್ರೀನಿವಾಸಪುರ: ಈ ಭಾಗದಲ್ಲಿ ನೀರಾವರಿ ಸಮಸ್ಯೆ ಹೆಚ್ಚಾಗಿದ್ದು, ಅರಣ್ಯವನ್ನು ಬೆಳೆಸುವ ಹಿತದೃಷ್ಟಿಯಿಂದ ನಮ್ಮರೋಟರಿ ಸಂಸ್ಥೆ ಸರ್ಕಾರದಹಲವು ಇಲಾಖೆಗಳ ಸಹಯೋಗದೊಂದಿಗೆಕೋಟಿ-ನಾಟಿಕಾರ್ಯಕ್ರಮವನ್ನು 100 ಕೋಟಿ ಗಿಡಗಳನ್ನು ನಾಟಿ ಮಾಡಿ ಪರಿಸರವನ್ನುಬೆಳೆಸಿ ಅಂತರ್ ಜಲವೃದ್ದಿ ಮಾಡಲು ನಮ್ಮ ಸಂಸ್ಥೆಯುಮುಂದಾಗುವುದೆಂದುಎಲೆಕ್ಟ್2020-21 ಡಿಸ್ಟ್ರಿಕ್ ಗೌರ್‍ನರ್ ನಾಗೇಂದ್ರ ಪ್ರಸಾದ್‍ತಿಳಿಸಿದರು.ಪಟ್ಟಣದಸರ್ಕಾರಿ ನೌಕರರ ಭವನದಲ್ಲಿ2019-20ನೇ ಸಾಲಿನ ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ನ ಪದಗ್ರಹಣಕಾರ್ಯಕ್ರಮದಲ್ಲಿಹಸಿರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಗೇಂದ್ರ ಪ್ರಸಾದ್, ಈ ತಾಲ್ಲೂಕಿನಲ್ಲಿ ದಳಸನೂರು ಗೋಪಾಲಕೃಷ್ಣ ಅವರ ನೇತೃತ್ವದಲ್ಲಿರೋಟರಿ ಸಂಸ್ಥೆ ಪ್ರಾರಂಬಿಸಿ 3 ವರ್ಷಗಳನ್ನು ಪೂರೈಸಿ 4ನೆ ವರ್ಷಕ್ಕಿಕಾಲಿಟ್ಟು, ಈ ವರ್ಷರೋಟರಿ ಸಂಸ್ಥೆಯತಾಲ್ಲೂಕುಜವಾಬ್ದಾರಿಯನ್ನುಆರ್.ವಿ. ಕುಲರರ್ಣಿ ಹೊತ್ತಿದ್ದಾರೆ, ಇವರಿಗೆ ಸಿಕ್ಕ ಅವಕಾಶದಲ್ಲಿಅತಿ ಹೆಚ್ಚು ಉತ್ತಮ ಸಮಾಜದ ಒಳಿತದ ಕೆಲಸವನ್ನು ಮಾಡಬೇಕಾಗಿದೆ.
ಈಗಾಗಲೆ 3 ವರ್ಷಗಳಲ್ಲಿ ರೋಟರಿ ಸಂಸ್ಥೆಯ ಸೇವೆ ಹೆಲ್ತ್‍ಕ್ಯಾಂಪ್, ಪರೀಕ್ಷಾ ಬೈಂಡ್ ವಿತರಣೆ, ನೋಟ್ ಪುಸ್ತಕಗಳ ವಿತರಣೆ, ಪಲ್ಸ್ ಪೊಲಿಯೋಕಾರ್ಯಕ್ರಮ, ಮತದಾನಜಾಗೃತಿಕಾರ್ಯಕ್ರಮ, ಗಿಡ ನೆಡುವಕಾರ್ಯಕ್ರಮ, 8ನೇ ತರಗತಿ ಮಕ್ಕಳಿಗೆ ನಿಘಂಟು ವಿತರಣೆಕಾರ್ಯಕ್ರಮ, ಕಣ್ಣಿನತಪಾಸಣಾ ಶಿಭಿರ,ಕೋಟಿ-ನಾಟಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಹಲವು ಶಾಲಾ ಕಾಲೇಜುಆವರಣದಲ್ಲಿಕೋಟಿ ನಾಟಿಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದಾರೆಎಂದರು. ರೋಟರಿ ಸಂಸ್ಥೆ ದೇಶ ವಿದೇಶಗಳಲ್ಲಿ ಅತ್ಯುತ್ತಮಜನ ಸೇವೆಯನ್ನು ಮಾಡಿಅಗ್ರಗಣ್ಯ ಸ್ಥಾನದಲ್ಲಿರೋಟರಿ ಸಂಸ್ಥೆ ಪ್ರಾವೀಣ್ಯತೆಯನ್ನು ಹೊಂದಿದೆ. ಈ ಸಂಸ್ಥೆಯಲ್ಲಿ ಪ್ರತಿಫಲಾಕ್ಷೆ ಪಡೆಯುವುದು ಏನೂ ಇರುವುದಿಲ್ಲ, ಸ್ವಯಂ ಪ್ರೇರಿತ ಮನೋಭಾವನೆಯಿಂದ ಈ ಸಂಸ್ಥೆ ಕೆಲಸ ನಿರ್ವಹಿಸಬೇಕು. ಮುಂದಿನ ವರ್ಷಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪ್ರತ್ಯೇಕ ಸ್ಥಳವನ್ನು ನಿಗಧಿಪಡಿಸಿ ರೋಟರಿ ಸಂಸ್ಥೆಯಿಂದಉತ್ತಮ ಗಿಡಗಳನ್ನು ನಾಟಿ ಮಾಡಿಅರಣ್ಯ ವನವನ್ನು ಬೆಳೆಸಿ ಹಸರೀಕರಣ ಮಾಡಿ ಈ ಭಾಗದಲ್ಲಿಅತಿ ಹೆಚ್ಚಾಗಿ ಮೆಳೆ ಬಂದುಅಂತರ ಜಲ ವೃದ್ದಿಯಾಗಲು ಅನುಕೂಲವಾಗುತ್ತದೆಎಂದು ತಿಳಿಸಿದರು.
ರೋಟರಿಸೆಂಟ್ರಲ್ ಶ್ರೀನಿವಾಸಪುರಅಧ್ಯಕ್ಷರಾದಆರ್. ವಿ. ಕುಲಕರ್ಣಿ ಮಾತನಾಡಿ, ನನಗೆ ಈ ಅವಕಾಶದಲ್ಲಿರೋಟರಿ ಸಂಸ್ಥೆಯಎಲ್ಲ ಪದಾದಿಕಾರಿಗಳ ಸಹಕಾರದೊಂದಿಗೆ ಹಿಂದಿನ ಅಧ್ಯಕ್ಷರುಗಳು ಹಾಗೂ ಜಿಲ್ಲಾ ಮತ್ತುರಾಜ್ಯದ ಹಿರಿಯರ ಮಾರ್ಗದರ್ಶನದಲ್ಲಿ ವಿನೂತನವಾಗಿ ಹೊಸ ಹೊಸ ಆಲೋಚನೆಗಳೊಂದಿಗೆ ನನ್ನಕೈಲಾದಷ್ಟು ನನ್ನ ಶಕ್ತಿಗಿಂತ ಮೀರಿ ಸೇವಾ ಮನೋಭಾವದ ಕೆಲಸಗಳನ್ನು ಮಾಡುತ್ತೇನೆ. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿಕ್ಷೇತ್ರಇವರ ಸಹಯೋಗದೊಂದಿಗೆತಾಲ್ಲೂಕಿನ ಹಲವು ಕೆರೆಗಳನ್ನು ಆಯ್ಕೆ ಮಾಡಿಕೊಂಡು ಊಳು ತೆಗೆದು ನೀರು ಸಂಗ್ರಹವಾಗುವಂತೆಮಾಡಿಅಂತರ್ ಜಲ ವೃದ್ದಿಯಾಗಲುನಾವು ಕಾರ್ಯ ನಿರ್ವಹಿಸಲು ಸದಾ ಸಿದ್ದರಾಗಿದ್ದು ಮುಂದಿನ ದಿನಗಳಲ್ಲಿ ಚಾಲನೆ ಮಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸಪುರಜೋನ್‍ಗೌರ್‍ನರ್ 2019-20 ರಾಮಚಂದ್ರೇಗೌಡ, ಅಸಿಸ್ಟೆಂಟ್ ಗೌರ್‍ನರ್‍ಬಿ.ಕೆ. ದೇವರಾಜ್, ಜಿಎಸ್.ಆರ್. ಎಸ್.ವಿ.ಸುದಾಕರ್, 2019-20ನೇ ಸಾಲಿನ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, 2018-19ನೇ ಸಾಲಿನ ಅಧ್ಯಕ್ಷರಾದಎಸ್.ಎನ್. ಮಂಜುನಾಥರೆಡ್ಡಿ, ಕಾರ್ಯದರ್ಶಿ ಎಸ್. ಶಿವಮೂರ್ತಿ, ಖಜಾಂಜಿ ಬೈರೇಗೌಡ, ಕೋಲಾರದ ಅ.ಮು.ಲಕ್ಷ್ಮೀನಾರಯಣ, ಕೋಲಾರ, ಕೆ.ಜಿ.ಎಫ್, ಮತ್ತು ಮುಳಬಾಗಿಲಿನ ರೋಟರಿ ಸಂಸ್ಥೆಯಅಧ್ಯಕ್ಷರು, ಕಾರ್ಯದರ್ಶಿಗಳು, ಪದಾದಿಕಾರಿಗಳು, ಶ್ರೀನಿವಾಸಪುರರೋಟರಿ ಸಂಸ್ಥೆಯಚಾರ್‍ಟರ್ಡ್ ಪ್ರೆಸಿಟೆಂಡ್ ಎಲ್. ಗೋಪಾಲಕೃಷ್ಣ, ಪಿಪಿ ರಾಜೇಂದ್ರಪ್ರಸಾದ್ ಹಾಗೂ ಪದಾದಿಕಾರಿಗಳು ಹಾಜರಿದ್ದರು.
