ಕೈಕಂಬ: : 2019-20ರ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಗಂಜಿಮಠದಲ್ಲಿ ಗ್ರಾಮಸಭೆಯು ನಡೆದಿದ್ದು, ಹಲವು ವಿಷಯಗಳನ್ನೆತ್ತಿ ಚರ್ಚೆಯನ್ನು ನಡೆಸಲಾಯಿತು. ಈ ಗ್ರಾಮ ಸಭೆಯಲ್ಲಿ ಕಸದ ಬಗ್ಗೆ ಹೆಚ್ಚು ಸುದ್ದಿಯನ್ನು ಮಾಡಿದಲ್ಲದೆ, ಗ್ರಾಮದ ಜನರು ಸಹಕರಿಸಿದರೆ ಕಸದ ವಿಲೆವಾರಿ ಸಮಸ್ಯೆಯು ಇತ್ಯರ್ಥವಾಗುತ್ತದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಎಂ ಹೇಳಿದರು.0033

ಅವರು ಗಂಜಿಮಠದ ಗ್ರಾಮ ಪಂಚಾಯತ್‍ನ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಯಾರೇ ಆಗಲಿ ಕಸವನ್ನು ಗಾಡಿಯ ಮುಖಾಂತರವೋ ಅಥವ ಇನ್ಯಾವುದೇ ರೀತಿಯಲ್ಲಿ ಕಸ ಬಿಸಾಡುವುದನ್ನು ನೋಡಿದರೆ ಅದನ್ನು ಗ್ರಾಮ ಪಂಚಾಯತ್‍ಗೆ ತಿಳಿಸಿ. ಅಂತಹವರ ವಿರುದ್ಧ ನಾವು ಕಠಿಣ ಕ್ರಮವನ್ನು ಕೈಗೊಳ್ಳುತ್ತೇವೆ. ಜನರು ಪಂಚಾಯತ್‍ಗೆ ರಸ್ತೆ ಬದಿಯಲ್ಲಿ ಬೀದಿ ದೀಪಗಳಿ ಅಳವಡಿಸಬೇಕೆಂದು ಹೇಳುತ್ತಾರೆ. ಅದರಂತೆ ಪಂಚಾಯತ್‍ನ ಮೆಂಬರ್‍ಗಳು ಮನವಿಯಂತೆ ಬೀದಿ ದೀಪಗಳನ್ನು ಹಾಕುತ್ತಾರೆ. ಆದರೆ ವಿಪರ್ಯಾಸವೆಂದರೆ ಆ ಬೀದಿ ದೀಪ ರಾತ್ರಿಯಲ್ಲಿ ಮಾತ್ರವಲ್ಲದೆ ಹಗಲಲ್ಲಿಯೂ ಕೂಡ ಉರಿಯುತ್ತದೆ. ಅದನ್ನು ಯಾರು ಕೂಡ ನಂದಿಸುವಂತಹ ಕೆಲಸವನ್ನು ಮಾಡುತ್ತಿಲ್ಲ. ಸಾರ್ವಜನಿಕ ಸ್ವತ್ತು ನಮ್ಮ ಸ್ವತ್ತು ಎಂದು ಎಲ್ಲರು ಅರಿತುಕೊಳ್ಳುಬೇಕು ಎಂದರು.24vpganjimata gramasabe

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಅಧಿಕಾರಿ ನಾಗರಾಜ್ ಎಂ, ಈ ಸಭೆಯಲ್ಲಿ ಯಾವ ವಿಷಯಗಳನ್ನು ಚರ್ಚಿಸಲಾಯಿತು ಅಂತಹ ವಿಷಯಗಳನ್ನು ಕಾರ್ಯರೂಪಕ್ಕೆ ತರುವಂತಹ ಕೆಲಸಕಾರ್ಯಗಳು ನಡೆಯಬೇಕು. ಯಾರೆಲ್ಲ ಸಮಸ್ಯೆಗಳ ಬಗ್ಗೆ ಪ್ರಸ್ತಾಪವನ್ನು ಎತ್ತಿದ್ದೀರೋ ಅಂತಹವರು ಹತ್ತು ದಿನಗಳ ನಂತರ ಸಂಬಂಧಪಟ್ಟವರಲ್ಲಿ ಮಾಹಿತಿಯನ್ನು ಕಲೆಹಾಕಿಕೊಳ್ಳುತ್ತಾ ಇರಬೇಕು ಎಂದು ತಿಳಿಸಿದರು.

000030303
ಸರಕಾರಿ ಬಸ್ಸಿಗೆ ಜನರ ಆಗ್ರಹ:
ಗ್ರಾಮ ಸಭೆಯಲ್ಲಿ ಬಸ್ಸಿನ ಸಮಸ್ಯೆಯ ಬಗ್ಗೆ ಪ್ರಸ್ತಾಪವೆತ್ತಿದ ಜನರು ನಮ್ಮ ಊರಿನಿಂದ ಮಂಗಳೂರಿಗೆ ಸರಕಾರಿ ಬಸ್ಸುಗಳು ಇಲ್ಲ. ಹಾಗಾಗಿ ಮಳಲಿಯಿಂದ ಪೊಳಲಿಯಾಗಿ ಮಂಗಳೂರಿನ ಕಡೆಗೆ ಸರಕಾರಿ ಬಸ್ಸನ್ನು ಹಾಕಬೇಕೆಂದು ಮಳಲಿಯ ಜನರು ಆಗ್ರಹಿಸದರು. ಸಭೆಯ ಮುಕ್ತಾಯದ ಹಂತದಲ್ಲಿ ಜನರು ಡೆಂಗ್ಯು ಮುಂತಾದ ರೋಗಗಳ ಬಗ್ಗೆ ಮಾಹಿತಿಯನ್ನು ನೀಡಲು ಆರೋಗ್ಯ ಅಧಿಕಾರಿಗಳು ಬರಬೇಕಿತ್ತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆರೋಗ್ಯ ಅಧಿಕಾರಿಯವರು ಕಾರಣಾಂತರಗಳಿಂದ ಬರಲಾಗದೆ ಅವರ ಅಸಿಸ್ಟೆಂಟ್ ಆಗಮಿಸಿದ್ದರು.
. ಇದರಿಂದ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಂಜಿನಿಯರ್ ಇಲಾಖೆಯ ಅಧಿಕಾರಿ ಪ್ರದೀಪ್ ಎಂ ಭಟ್ ,ಮಸ್ಕಾಂ ಇಲಾಖೆಯ ಅಧಿಕಾರಿ ಮೋಹನ್ , ಪಶುಸಂಗೋಪನಾ ಇಲಾಖಾಧಿಕಾರಿ ಡಾ. ವಿಶ್ವರಾಧ್ಯ , ಶಿಶು ಅಭವೃದ್ಧಿ ಯೋಜಾನಾಧಿಕಾರಿ ಉಷಾ ಡಿ. ಜಿ.ಪಂ. ಸದಸ್ಯ ಯು.ಪಿ ಇಬ್ರಾಹಿಂ, ತಾ.ಪಂ ಸದಸ್ಯ ಜಿ ಸುನೀಲ್ ಗ್ರಾಮಕಾರಣಿಕ ದಿನೇಶ್ ಕುಮಾರ್, ಗ್ರಾ. ಪಂ. ಉಪಾಧ್ಯಕ್ಷ ಝಾಕೀರ್ ಆರ್ ಎಸ್ ಮತ್ತು ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *