ಬಂಟ್ವಾಳ: ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಮಧ್ಯವಯಸ್ಕ ಪ್ರಯಾಣಿಕರೊಬ್ಬರು ಕುಳಿತಲ್ಲೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ದಾರಿ ಮಧ್ಯೆ ಇವರು ಮಥಪಟ್ಟರಬೇಕೆಂದು ಶಂಕಿಸಲಾಗುದ್ದು, ಬಸ್ ನ ನಿರ್ವಾಹಕನ ಸೂಚನೆಯಂತೆ ಬಸ್ ನ್ನು ಬಿ.ಸಿ.ರೋಡಿನಲ್ಲಿ ನಿಲ್ಲಿಸಿ ಬಂಟ್ವಾಳ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.ಸ್ಥಳಕ್ಜಾಗಮಿಸಿದ ಪೊಲೀಸರು ಮೃತರ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.
