ಕಾರ್ಕಳ: ಕಾರ್ಕಳದ ಮೂರು ಶಾಲೆಗಳಲ್ಲಿ ಶನಿವಾರ ರೆಮೋನಾ ಕಲಾಯಾನ ಸರಣಿ ಕಾರ್ಯಕ್ರಮದ ಅಂಗವಾಗಿ ಮೂರು ವಿಶ್ವದಾಖಲೆಗಳ ಬಾಲ ಕಲಾವಿದೆ ರೆಮೊನಾ ಇವೆಟ್ ಪಿರೇರಾ ಅವರ ನೃತ್ಯ ಪ್ರದರ್ಶನ ನಡೆಯಲಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಒಬ್ಬೊಬ್ಬ ಆಹ್ವಾನಿತ ಬಾಲ ಕಲಾವಿದರ ನೃತ್ಯ ವಿರುತ್ತದೆ ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.

07HBR01 - REMONA EVET PIRERA
ಮೊದಲ ಕಾರ್ಯಕ್ರಮ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಪೆರ್ವಾಜೆಯಲ್ಲಿ ಬೆಳಗ್ಗೆ 10.00 ರಿಂದ ನಡೆಯಿಲಿದ್ದು ಬಹುಮುಖ ಪ್ರತಿಭೆ ಮೂಡುಬಿದಿರೆಯ ಪ್ರಕೃತಿ ಮಾರೂರು ಅವರು ಭರತನಾಟ್ಯ ಪ್ರದರ್ಶನ ನೀಡುವರು. ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಹೆಗಡೆ ಉಪಸ್ಥಿತರಿರುವರು. ದಿನದ ಎರಡನೇ ಕಾರ್ಯಕ್ರಮವು ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲೆ ಪೆರ್ವಾಜೆಯಲ್ಲಿ 11.30 ಕ್ಕೆ ನಡೆಯಲಿದ್ದು ಡ್ರಾಮಾ ಜ್ಯೂನಿಯರ್ ರನ್ನರ್ ಕಾರ್ಕಳದ ಕ್ರೈಸ್ಟ್‍ಕಿಂಗ್ ಶಾಲೆಯ ಸೃಷ್ಟಿ ಶೆಟ್ಟಿ ರೆಂಜಾಳ ಆಹ್ವಾನಿತ ಬಾಲ ಪ್ರತಿಭೆ ಆಗಿರುವರು. ಮೂಖ್ಯೋಪಾಧ್ಯಾಯಿನಿ ಹರ್ಷಿಣಿ ಉಪಸ್ಥಿತರಿರುವರು.
ದಿನ ಮೂರನೇ ಕಾರ್ಯಕ್ರಮ ಕ್ರೈಸ್ಟ್ ಕಿಂಗ್ ಜೂನಿಯರ್ ಕಾಲೇಜಿನಲ್ಲಿ ಮಧ್ಯಾಹ್ನ 2.30 ಕ್ಕೆ ನಡೆಯಲಿದ್ದು ನ್ಯಾಶನಲ್ ಟ್ಯಾಲೆಂಟೆಡ್ ಡ್ಯಾನ್ಸರ್ ಖ್ಯಾತಿಯ ಶೃಜನ್ಯ ಜೆ.ಕೋಟ್ಯಾನ್ ಭರತನಾಟ್ಯ ಪ್ರದರ್ಶನ ನೀಡುವರು. ಪ್ರಾಂಶುಪಾಲ ಡಾ.ನಾರಾಯಣ ಶೇಡಿಕಜೆ ಅವರು ಉಪಸದಥಿತರಿರುವರು.

By suddi9

Leave a Reply

Your email address will not be published. Required fields are marked *