ಕಲ್ಲಡ್ಕ:ಶಿಕ್ಷಣ ಕ್ಷೇತ್ರದಲ್ಲಿಬದಲಾವಣೆಗಳಾದಾಗ ಒಪ್ಪಿಕೊಳ್ಳುವ ಮನೋಸ್ಥಿತಿ ನಿರ್ಮಾಣವಾಗಬೇಕು ಆಗ ಶಿಕ್ಷಣ ದೃಢವಾಗುತ್ತದೆಎಂದುಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿನಡೆದದಶಮಾನೋತ್ಸವಕಾರ್ಯಕ್ರಮ ಉದ್ಘ್ಘಾಟಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದಪ್ರೊ.ಪಿ.ಸುಬ್ರಹ್ಮಣ್ಯಯಡಪಡಿತ್ತಾಯಇವರು ಮಾತನಾಡಿದರು.

DSC_0116
ಅವರುಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ 210 ಕಾಲೇಜುಗಳಲ್ಲಿ ರಾಷ್ಟ್ರಾಭಿಮಾನ, ಸಂಸ್ಕಾರ, ಸಂಸ್ಕøತಿಯನ್ನು ಬಿಂಬಿಸುವ ಶ್ರೀರಾಮ ಕಾಲೇಜಿಗೆ ವಿಶೇಷ ಸ್ಥಾನಮಾನ. ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬಲ್ಲ ಮಾನಸಿಕ ಶಾರೀರಿಕ, ಬೌದ್ಧಿಕ, ಸಾಮಾಜಿಕಆಧ್ಯಾತ್ಮಿಕ 5 ಆಯಾಮಗಳ ಮೂಲಕವೇ ಇಲ್ಲಿ ಶಿಕ್ಷಣವನ್ನು ನೀಡುತ್ತಿರುವುದು ವಿಶೇಷ ಎಂದರು. .

DSC_0155
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರುಇದರಅಧ್ಯಕ್ಷಡಾ| ಪ್ರಭಾಕರ ಭಟ್‍ಕಲ್ಲಡ್ಕಮಾತನಾಡಿಸಮಾಜದ ಸಚ್ಚಾರಿತ್ಯವನ್ನು ಉಳಿಸುವ ನಿಟ್ಟಿನಲ್ಲಿ,ದೇಶದಗರಿಮೆ, ಹಿರಿಮೆ, ಸಂಸ್ಕಾರ, ಸಂಸ್ಕøತಿಯನ್ನುಶಿಕ್ಷಣದ ಜೊತೆಗೆಎತ್ತಿ ಹಿಡಿಯುವ ವಿದ್ಯಾ ಸಂಸ್ಥೆಗಳ ಅವಶ್ಯಕತೆಇದ್ದು ನಮ್ಮ ಸಂಸ್ಥೆಯು ಈ ನಿಟ್ಟಿನಲ್ಲಿಕಾರ್ಯ ನಿರ್ವಹಿಸುತ್ತಿದೆಎಂದರು.
ಎನ್. ಎಂ. ಪಿ. ಟಿ. ಅಧ್ಯಕ್ಷರಾದ ಎ.ವೆಂಕಟರಮಣಅಕ್ಕರಾಜುಇವರುಜೀವನ ಮೌಲ್ಯಗಳನ್ನು ಕಲಿಸುವ ನಮ್ಮ ಸಂಸೃತಿರಾಮಾಯಣ, ಪುರಾಣಗಳನ್ನು ಕಲಿಸಲು ಹಿಂಜರಿಯುತ್ತಿರುವ ಈ ಕಾಲದಲ್ಲಿ ಈ ಶಿಕ್ಷಣ ಸಂಸ್ಥೆಯು ಮಾದರಿಯಾಗಿದ್ದು, ಮುಂದೊಂದು ದಿನ ಸ್ವರ್ಣ ಭಾರತವನ್ನುಕಾಣುವ ಭರವಸೆಇದೆಎಂದರು. ಆರ್.ಟಿ ಐ ಕಮೀಷನರ್ ಸಂತೋಷ್. ಯಲ್. ಪಾಟೀಲ್‍ಅಗ್ನಿ ಹೋತ್ರದ ಮೂಲಕ ಪ್ರವೇಶೋತ್ಸವಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

DSC_0251
ಬೆಳಗಾವಿ, ಕುಡಚಿ ವಿಧಾನಸಭಾಕ್ಷೇತ್ರದ ಶಾಸಕ ಪಿ.ರಾಜೀವ ಮಾತನಾಡಿ ವಿದ್ಯಾರ್ಥಿಯ ವಿದ್ಯಾಭ್ಯಾಸವು ಭರತಮಾತೆಗೆ ಮುಡಿಪಾಗಿರಲಿ ಎಂದರು.ಚಲನ ಚಿತ್ರೋದ್ಯಮದಖ್ಯಾತ ನಿರ್ಮಾಪಕ ಟಿ. ಆರ್.ಚಂದ್ರಶೇಖರಇವರು ವಿದ್ಯೆಯೆಂಬುದು ಬರೀ ಸಾಕ್ಷರತೆಯಲ್ಲ, ದೈವತ್ವಕ್ಕೆಏರಿಸುವಂತಹುದು.ಇಲ್ಲಿ ಸಿಗುವ ಶಿಕ್ಷಣ ದೇಶದ ಮೂಲೆಮೂಲೆಗಳಿಗೂ ಪಸರಿಸಲಿ ಎಂದಾಶಿಸಿದರು. ದಶಮಾನೋತ್ಸವ ಸ್ಮರಣಾರ್ಥವಾಗಿತೆಂಗಿನ ಸಸಿಯನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿಉದ್ಯಮಿ ಪ್ರಕಾಶ್ ಭಟ್, ಪ್ಯಾರಾಒಲಂಪಿಕ್ ಸ್ವರ್ಣಪದಕ ವಿಜೇತ ನಯಮತ್ತುಲ್ಲಾಖಾನ್, ಮುನೀಶ್‍ಕುಮಾರ್, ಸಂಸ್ಥೆಯಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕರಮೇಶ್‍ಎನ್,ರಾಷ್ಟ್ರ ಸೇವಿಕಾ ಸಮಿತಿದಕ್ಷಿಣ ಪ್ರಾಂತಕಾರ್ಯಕಾರಿಣಿ ಸದಸ್ಯೆ ಕಮಲಾ ಪ್ರಭಾಕರ ಭಟ್‍ಉಪಸ್ಥಿತರಿದ್ದರು. ಬಂಕಿಮ ಚಂದ್ರಚಟರ್ಜಿಯವರಜನ್ಮದಿನದ ಅಂಗವಾಗಿ ಹಿರಿಯ ವಿದ್ಯಾರ್ಥಿನಿ ವಿದ್ಯಾಶ್ರೀ ವಂದೇ ಮಾತರಂ ಹಾಡಿದರು.
ಈ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತಿಲಕಧಾರಣೆ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ, ಅಗ್ನಿಗೆಹವಿಸ್ಸನ್ನು ಅರ್ಪಿಸಿದರು.ಕಾರ್ಯಕ್ರಮವನ್ನುಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದಕಾಯರ್‍ಕಟ್ಟೆ ಪರಿಚಯಿಸಿ ಸ್ವಾಗತಿಸಿದರು.ವಿದ್ಯಾರ್ಥಿಗಳಾದ ಸಾಕ್ಷ್ಯ ವಂದಿಸಿ,ಭವಾನಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *