ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಸದ ಉಮೇಶ್ ಜಾದವ್ ಅವರ ಪತ್ನಿ ಗಾಯತ್ರಿ ಜಾದವ್ ಹಾಗೂ ಸಂಬಂಧಿ ಸಂಗೀತಾ ಲಕ್ಷ್ಮಣ್ ಪವಾರ್ ಅವರು ಗುರುವಾರ ಭೇಟಿ ನೀಡಿ, ದೇವರ ದರ್ಶನ ಪಡೆದರು.

 

 

Gayathri Jadava
10 ವರ್ಷಗಳ ಹಿಂದೆ ಪೊಳಲಿಗೆ ಭೇಟಿ ನೀಡಿದ್ದು, ಈಗ ದೇವಸ್ಥಾನ ಜೀರ್ಣೋದ್ಧಾರಗೊಂಡಿರುವುದು ನೋಡಲು ಮತ್ತಷ್ಟು ಆನಂದ ಉಂಟು ಮಾಡುತ್ತಿದೆ. ದೇವರ ದರ್ಶನ ಪಡೆದು ಸಂತಸವಾಗಿದೆ ಎಂದು ಗಾಯತ್ರಿ ಜಾದವ್ ಅಭಿಪ್ರಾಯಪಟ್ಟಿದ್ದಾರೆ.
ದೇವಳದ ಅರ್ಚಕ ಪರಮೇಶ್ವರ ಭಟ್ ಪ್ರಸಾದ್ ನೀಡಿದರು. ದೇವಳದ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್, ಕರಿಯಂಗಳ ಗ್ರಾ.ಪಂ ಸದಸ್ಯ ಲೋಕೇಶ್ ಭರಣಿ, ಕುಮಾರ್ ಪೊಳಲಿ, ನವೀನ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *