ವಿಟ್ಲ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ವಿಟ್ಲ ಬಿ ಒಕ್ಕೂಟದ ಜೋಗಿಮಠ ಸೋಮಪ್ಪ ಪೂಜಾರಿಯವರ ಮನೆಯಲ್ಲಿ ಭೈರವಿ ತಂಡವನ್ನು ವಲಯ ಮೇಲ್ವಿಚಾರಕ ರಮೇಶ್ ಉದ್ಘಾಟಿಸಿದರು.

ಪ್ರಬಂಧಕರಾಗಿ ಲಲಿತ, ಸಂಯೋಜಕರಾಗಿ ಶೋಭಾವತಿ, ಕೋಶಾಧಿಕಾರಿಯಾಗಿ ವಿಮಲ ಇವರನ್ನು ಆಯ್ಕೆ ಮಾಡಲಾಯಿತು. ವಿಟ್ಲ ಬಿ ಒಕ್ಕೂಟದ ಸೇವಾ ಪ್ರತಿನಿಧಿ, ಸರಿತಾ ಮತ್ತು ಶಿವಗಂಗಾ ತಂಡದ ಹರಿಣಾಕ್ಷಿ ಉಪಸ್ಥಿತರಿದ್ದರು.
