ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರ ಹಾಗೂ ಗುರುವಿನ ಪಾತ್ರವು ಬಹಳ ಪ್ರಾಮುಖ್ಯವಾದುದು. ವಿದ್ಯಾರ್ಥಿಯ ಕಲಿಕೆಯು ಕೇವಲ ಅಂಕ ಗಳಿಸುದಕ್ಕೇ ಸೀಮಿತವಾಗಿರದೆ ಶಿಸ್ತು,ನಿಯಮ ಹಾಗೂ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಸಂಸ್ಕಾರಯುತವಾದ ಮನಸ್ಸು ಹೊಂದಿರುವ ಒಳ್ಳೆಯ ಮನುಷ್ಯನಾಗಬೇಕು ಎಂದು ವಿಠಲ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಧಾಕೃಷ್ಣ ಭಟ್ ಅವರು ಹೇಳಿದರು.
ಅವರು ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿ.ಯು.ಸಿ ತರಗತಿಯ ವಿದ್ಯಾರ್ಥಿಗಳ ಹೆತ್ತವರ ಸಭೆ, ಹತ್ತನೇ ತರಗತಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಪ್ರಸ್ತುತ ಪ್ರಥಮ ಪಿ.ಯು.ಸಿ ಕಲಿಯುತ್ತಿರುವ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿದ್ಯಾರ್ಥಿಯು ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಗುರಿಯತ್ತ ಮುನ್ನಡೆದು ಸಮಾಜ ಸೇವೆಯಲ್ಲಿ ತೊಡಗುವುದರೊಂದಿಗೆ ದೇಶದ ಹಾಗೂ ತಂದೆತಾಯಿಗಳ ಕೀರ್ತಿಯನ್ನು ಬೆಳಗಿಸಬೇಕೆಂದು ಅವರು ಹೇಳಿದರು.ವಿಠಲ ವಿದ್ಯಾಸಂಘದ ಸಂಚಾಲಕ ಎಲ್.ಯನ್.ಕೂಡೂರು ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ಪ್ರಕಾಶ್ ನಾಯಕ್ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳ ಹಾಗೂ ಚಟುವಟಿಕೆಗಳ ಮಾಹಿತಿ ನೀಡಿದರು. ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸ್ವಾಗತಿಸಿ, ಉಪನ್ಯಾಸಕಿಯಾದ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ರಕ್ಷಿತಾ ರೈ ವಂದಿಸಿದರು.ಉಪನ್ಯಾಸಕರಾದ ಅಣ್ಣಪ್ಪ ಸಾಸ್ತಾನ, ಜಲಜಾಕ್ಷಿ ಹಾಗೂ ರೂಪಶ್ರೀ ಸಹಕರಿಸಿದರು. ವಿಠಲ ವಿದ್ಯಾಸಂಘದ ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯರಾದ ಜಾನ್ ಡಿಸೋಜ, ಪದ್ಮಯ್ಯ ಗೌಡ, ಬಾಬು ಕೆ.ವಿ., ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ ಹಾಗೂ ಹಿರಿಯ ಉಪನ್ಯಾಸಕಿ ಚಂದ್ರಕಲಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅನುಷಾ ಮತ್ತು ಬಳಗ ಪಾರ್ಥಿಸಿದರು.
