ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ವಿದ್ಯಾರ್ಥಿ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ವಿಟ್ಲ ಠಾಣಾಧಿಕಾರಿ ಎಲ್ಲಪ್ಪ.ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ನಾಯಕತ್ವದ ಗುಣ ಬಾಲ್ಯದಿಂದಲೇ ಮಕ್ಕಳಲ್ಲಿ ಮೈಗೂಡಬೇಕು, ಮಂತ್ರಿಮಂಡಲದ ಕಾರ್ಯ ಕೇವಲ ಪ್ರಮಾಣವಚನ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ನಿರಂತರವಾಗಿ ಶಾಲಾಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು.

IMG_2682[1]
ಅಧ್ಯಕ್ಷತೆ ವಹಿಸಿದ್ದ ಸಂಚಾಲಕ ಜೆ.ಪ್ರಹ್ಲಾದ್ ಶೆಟ್ಟಿ ಮಾತನಾಡಿ, ಮಂತ್ರಿಮಂಡಲವು ಶಿಕ್ಷಕರ ಮಾರ್ಗದರ್ಶನದೊಂದಿಗೆ ವ್ಯವಸ್ಥಿತ ಕಾರ್ಯಕ್ರಮಗಳನ್ನು ರೂಢಿಸಿಕೊಂಡು ಯಶಸ್ವಿಯಾಗಿ ಕಾರ್ಯಾಚರಿಸಲಿ ಎಂದು ಶುಭಹಾರೈಸಿದರು.
ಪೊಲೀಸ್ ಉಪಠಾಣಾಧಿಕಾರಿ ರಾಜೇಶ್, ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್ ಪಿ.ಸಲ್ಡಾನಾ ಉಪಸ್ಥಿತರಿದ್ದರು.
ಶಿಕ್ಷಕಿ ಮೋಹಿನಿ ಎ ರೈ. ದೃಢೀಕರಣ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಶಾಲಾ ನಾಯಕಿಯಾಗಿ ದೀಪಾಲಿ ಎಮ್.ಎಸ್, ಉಪನಾಯಕಿಯಾಗಿ ಆಶಿತಾ ಎನ್.ರಾವ್, ಗೃಹಮಂತ್ರಿಯಾಗಿ ಶ್ರೀರಕ್ಷಾ, ಆರೋಗ್ಯಮಂತ್ರಿಯಾಗಿ ಪ್ರೀತಿಕಾ ಎಸ್.ಶೆಟ್ಟಿ , ಸಾಂಸ್ಕ್ರತಿಕ ಮಂತ್ರಿಯಾಗಿ ಯತೀಶ್ ಕುಮಾರ್, ಕ್ರೀಡಾ ಮಂತ್ರಿಯಾಗಿ ಆಕಾಶ್.ಡಿ.ಜಿ ಪ್ರಮಾಣ ವಚನ ಸ್ವೀಕರಿಸಿದರು. ಶಿಕ್ಷಕಿಯರಾದ ಸುಧಾ.ಎನ್.ರಾವ್ ಸ್ವಾಗತಿಸಿ, ರಶ್ಮಿ ಫೆರ್ನಾಂಡಿಸ್ ವಂದಿಸಿದರು. ಶಿಕ್ಷಕಿಯರಾದ ಜಯಶ್ರೀ ಆಚಾರ್ಯ, ಶೋಭಾ ಎಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *