ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 84 ವಿದ್ಯಾರ್ಥಿಗಳಿಗೆ ಚಂದಳಿಕೆ ವಿದ್ಯಾವರ್ಧಕ ಸಂಘದ ವತಿಯಿಂದ ಮುಂಬೈ ನಿವಾಸಿ ಭುಜಂಗ ಶೆಟ್ಟಿ ಇವರು ಉದಾರವಾಗಿ ನೀಡಿದ ಬರೆಯುವ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಯಿತು.

ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಕೋಶಾಧಿಕಾರಿ ಗೌತಮ್ ಶೆಟ್ಟಿ ಕೊಲ್ಯ, ಕಾರ್ಯದರ್ಶಿ ಶ್ರಿವಾಸ ಚಂದಳಿಕೆ ಶಿಲ್ಪಾ ಫರ್ನಿಚರ್, ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಕುಳಾಲು ಸಹಶಿಕ್ಷಕರು ಉಪಸ್ಥಿತರಿದ್ದರು.
