ಮುಂಬಯಿ,: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಹಳೆಯಂಗಡಿ ಸಾಯಿಕೃಪಾ ನಿವಾಸಿ, ಕೊಡುಗೈದಾನಿ,ಸಾಮಾಜಿಕ ಚಿಂತಕಿ ಜಾನಕಿ ಆನಂದ್ ಸಾಲ್ಯಾನ್ ಹಳೆಯಂಗಡಿ (75.) ಇವರು ಇಂದಿಲ್ಲಿ ಬುಧವಾರ ಮುಂಜಾನೆ ಮಂಗಳೂರುನಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಮಂಗಳವಾರ ತನ್ನ ಸ್ವನಿವಾಸದಲ್ಲಿ ಅಡುಗೆ ಮಾಡುತ್ತಿರುವ ವೇಳೆ ಬೆಂಕಿ ಅನಾಹುತಕ್ಕೆ ಒಳಗಾಗಿದ್ದ ಜಾನಕಿ ಅವರನ್ನುಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಾಗಿತ್ತು.
ಮುಂಬಯಿ ಅಲ್ಲಿನ ಹೆಸರಾಂತ ಸಾಯಿಕೇರ್ ಸಂಸ್ಥೆಯ ಆಡಳಿತ ನಿರ್ದೇಶಕ, ಮದರ್ ಇಂಡಿಯಾ ನೈಟ್ ಹೈಸ್ಕೂಲ್ ಫೋರ್ಟ್(ಮುಂಬಯಿ) ಇದರ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಲಹಾ ಸಮಿತಿ ಸದಸ್ಯ ಸುರೇಂದ್ರ ಎ.ಪೂಜಾರಿ ಸೇರಿದಂತೆಮೃತರು ಏಳು ಗಂಡು, ಒಂದು ಹೆಣ್ಣು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

