ಮುಂಬೈ; ‘ಸ್ಟೂಡೆಂಟ್ ಆಫ್ ದ ಇಯರ್’ ಸಿನಿಮಾದ ಮೂಲಕ ನಾಯಕಿಯಾಗಿ ಬಾಲಿವುಡ್ಗೆ ಎಂಟ್ರಿ ಪಡೆದಿರುವ ಆಲಿಯಾ ಭಟ್ ಸದ್ಯ ಬ್ಯುಸಿ ನಟಿ. ಎಷ್ಟು ಬ್ಯುಸಿ ಎಂದರೆ ತನ್ನ ತಾಯಿಯ ಸಿನಿಮಾದಲ್ಲಿ ನಟಿಸುವಷ್ಟು ಪುರುಸೊತ್ತು ಕೂಡಾ ಆಕೆಗಿಲ್ಲ.
ಆಲಿಯಾ ತಾಯಿ ಸೋನಿ ರಾಜ್ದಾನ್ ತನ್ನ ಮಗಳಿಗಾಗಿಯೇ ಕತೆಯೊಂದನ್ನು ಸಿದ್ಧಪಡಿಸಿದ್ದಾರೆ. ಆದರೆ ಸದ್ಯ ಈ ಚಿತ್ರದಲ್ಲಿ ನಟಿಸುವಷ್ಟು ಸಮಯ ತನ್ನ ಬಳಿ ಇಲ್ಲವೆಂದು ಆಲಿಯಾ ನೇರವಾಗಿಯೇ ಹೇಳಿಬಿಟ್ಟಿದ್ದಾಳಂತೆ. ಇದರಿಂದ ಬೇಸರಗೊಳ್ಳದ ಸೋನಿ ಮಗಳಿಗಾಗಿ ಕಾಯುವುದಾಗಿ ಹೇಳಿದ್ದಾರೆ. ‘ಸಂಘಷರ್್’ ಸಿನಿಮಾದಲ್ಲಿ ಬಾಲ ನಟಿಯಾಗಿ ಬಾಲಿವುಡ್ಗೆ ಪರಿಚಯಗೊಂಡ ಆಲಿಯಾ ನಂತರ ಸಂಜಯ್ ಲೀಲಾ ಬನ್ಸಾಲಿಯ ಬ್ಲ್ಯಾಕ್ ಸಿನಿಮಾಕ್ಕೆ ಆಡಿಶನ್ನಲ್ಲಿ ಪಾಲ್ಗೊಂಡಿದ್ದಳು. ಒರ್ವ ನಟಿಯಾಗಬೇಕೆಂದು ಚಿಕ್ಕಂದಿನಿಂದಲೂ ಆಸೆ ಹೊಂದಿದ್ದ ಆಕೆಯ ಕನಸು ಕರಣ್ ಜೊಹರ್ ಮೂಲಕ ಈಡೇರಿತ್ತು. ಈಗ ಬಿಡುಗಡೆಗೆ ಸಿದ್ಧವಾಗಿರುವ ಆಕೆಯ ‘ಹೈವೇ’ ಚಿತ್ರ ಕೂಡಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಪ್ರಖ್ಯಾತ ಚಿತ್ರ ನಿದರ್ೇಶಕ ಮಹೇಶ್ ಭಟ್ ಮಗಳಾಗಿರುವ ಆಲಿಯಾಗೆ ತಂದೆಯ ನಿದರ್ೇಶನದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಆದರೆ ಮಹೇಶ್ ಭಟ್ ಆಗಲೇ ಚಿತ್ರ ನಿದರ್ೇಶನದಿಂದ ನಿವೃತ್ತನಾಗಿ ಹಲವು ವರ್ಷಗಳು ಕಳೆದಿವೆ. ಹಾಗಾಗಿ ಅದು ಕನಸಿನ ಮಾತು ಎಂಬುದು ಆಕೆಗೆ ತಿಳಿದಿದೆ. ಮತ್ತೊಂದೆಡೆ ತಾಯಿ ಸೋನಿ ಚಿತ್ರ ನಿದರ್ೇಶನಕ್ಕೆ ಇಳಿದಿದ್ದರೂ ಆ ಚಿತ್ರದಲ್ಲಿ ನಟಿಸಲು ಮಗಳಿಗೆ ಪುರುಸೋತ್ತಿಲ್ಲ.
