ಮೂರು ತಿಂಗಳ ಬಳಿಕ ಮತ್ತೆ ವೈನ್ಶಾಪ್ ಬಂದ್!
ಬಜ್ಪೆ: ಕಳೆದ ಮೂರು ತಿಂಗಳ ಹಿಂದೆ ಸಾರ್ವಜನಿಕರ ಪ್ರತಿಭಟನೆಯಿಂದಾಗಿ ಪೊರ್ಕೋಡಿಯ ಅನಧಿಕೃತ `ಪೊರ್ಕೋಡಿ ವೈನ್ ಶಾಪ್’ ಕಳೆದ ಮಂಗಳವಾರದಿಂದ ಮತ್ತೆ ತೆರೆದಿರುವುದರ ಬಗ್ಗೆ ನಡೆಸಿದ್ದ ಪ್ರತಿಭಟನೆ ಗುರುವಾರ ಮಧ್ಯಾಹ್ನದವರೆಗೂ ಮುಂದುವರಿದಿತ್ತು. ಆದರೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮೂರು ತಿಂಗಳ ಬಳಿಕ ನ್ಯಾಯಾಲಯದ ಮುಖಾಂತರ ವೈನ್ ಶಾಪ್ ಬಂದ್ ಮಾಡುವುದಾಗಿ ಮನವೊಲಿಸಿರುವುದರಿಂದ ಸಾರ್ವಜನಿಕರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ.

18 v m malavoor punchayath (1)

 

18 v m malavoor punchayath (1)3



ಕಳೆದ ಮೂರು ತಿಂಗಳ ಹಿಂದೆ ನಡೆದಿದ್ದ ಪ್ರತಿಭನೆಯ ಸಂದರ್ಭ ದ.ಕ ಜಿಲ್ಲಾಧಿಕಾರಿ, ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಲೋಕಾಯುಕ್ತದ ಸಮಕ್ಷಮದಲ್ಲಿ ವೈನ್ ಶಾಪ್ ಬಂದ್ ಮಾಡಿ ಬೀಗಮುದ್ರೆ ಜಡಿಯಲಾಗಿತ್ತು.ಮಂಗಳವಾರ ಮತ್ತೆ ತೆರದಿರುವುದನ್ನು ಗಮನಿಸಿದ್ದ ಪೊಕರ್ೋಡಿಯ ಸಾರ್ವಜನಿಕರು ಗರಂ ಆಗಿದ್ದು, ಎಲ್ಲರೂ ಒಟ್ಟು ಸೇರಿ ಮಳವೂರು ಗ್ರಾಮ ಪಂಚಾಯತ್ಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ಸಲ್ಲಿಸಿದ್ದರು.
ಮಳವೂರು ಪಂಚಾಂಯತ್ನ ಪಿಡಿಓ ಆಗಿರುವ ಹರಿಶ್ಚಂದ್ರ ಅವರಲ್ಲಿ ಅಕ್ರಮ ವೈನ್ ಶಾಪ್ ಮುಚ್ಚಬೇಕೆಂದು ಸಾರ್ವಜನಿಕರು ಒತ್ತಾಯಪಡಿಸಿದಾಗ ನಾನು ಕ್ರಮಕೈಗೊಳ್ಳುವಂತಿಲ್ಲ, ತುರ್ತು ಪಂಚಾಯತ್ ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಪಿಡಿಓ ತಿಳಿಸಿದ್ದರು. ಆಗ ಪ್ರತಿಭಟನಾನಿರತ ಮಹಿಳೆಯರು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ನಾವೇ ಕರೆಯಿಸಿ ವಿಚಾರಿಸುತ್ತೇವೆ, ಮೂರು ತಿಂಗಳಿನಿಂದ ಮುಚ್ಚಿದ್ದ ವೈನ್ಶಾಪ್ ಮತ್ತೆ ತೆರೆಯಲು ಹೇಗೆ ಅನುಮತಿ ನೀಡಿದ್ದಿರಿ ಎಂದು ಪಟ್ಟುಹಿಡಿದಾಗ ಪಿಡಿಓ ಉತ್ತರಿಸಿಲು ನಿರಾಕರಿಸಿದ್ದರು.
ಇದರಿಂದ ಗರಂ ಆಗಿದ್ದ ಸಾರ್ವಜನಿಕರು ಪಿಡಿಓ ಅವರು ತಮ್ಮ ಹೇಳಿಕೆಯನ್ನು ಲಿಖಿತವಾಗಿ ಬರೆದುಕೊಡಬೇಕೆಂದು ಒತ್ತಾಯಪಡಿಸಿದ್ದಾಗ ಪಿಡಿಓ ಅವರು ಸಾರ್ವಜನಿಕರು ಪಂಚಾಯತ್ಗೆ ಬಂದು ತಮ್ಮ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಬಜ್ಪೆ ಠಾಣೆಗೆ ದೂರು ಬರೆದು ಸಲ್ಲಿಸಿದ್ದರು. ಅಲ್ಲದೆ ಪಿಡಿಓ ಬೇಜಾವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆಂದು ಆರೋಪಿಸಿ ಅವರ ವಿರುದ್ಧವೂ ದೂರು ಸಲ್ಲಿಸಿದ್ದರು.
ಪಂ. ಅಧ್ಯಕ್ಷರನ್ನು ಹಾಗೂ ಪಿಡಿಓ ಅವರನ್ನು ಜಾಗ ಬಿಟ್ಟು ಕದಲದಂತೆ ಮಾಡಿದ್ದ ಸಾರ್ವಜನಿಕ ಮಹಿಳೆಯರು ಬುಧವಾರದಿಂದ ಪಂ, ಮುಂಭಾಗದಲ್ಲೇ ಜಂಡಾವೂರಿದ್ದರಲ್ಲದೆ, ವೈನ್ ಶಾಪ್ ಬಂದ್ ಆಗದ ಹೊರತು ಜಾಗಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಬುಧವಾರ ರಾತ್ರಿಯವೇಳೆಗೆ ಪ್ರತಿಭಟನೆ ಕಾವು ಪಡೆದಿದ್ದು, ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.
ಆದರೆ ಗುರುವಾರ ಮಧ್ಯಾಹ್ನದ ವೇಳೆಗೆ ಆಗಮಿಸಿದ ಅಬಕಾರಿ ಅಧಿಕಾರಿಗಳು ಸಾರ್ವಜನಿಕರ ಮನವೊಲಿಸಲಾರಂಭಿಸಿದ್ದಾರೆ. ಅಲ್ಲದೆ ವೈನ್ಶಾಪ್ ಮಾಲಿಕ ಕೂಡಾ ಕೋಟರ್್ ನೋಟೀಸ್ ಮುಖಾಂತರ ವೈನ್ಶಾಪ್ ತೆರೆದಿರುವುದಾಗಿ ತಿಳಿಸಿದ್ದಾರೆ. ಕೊನೆಗೆ ಮಾತಾಡಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಮೂರು ತಿಂಗಳ ನಂತರ ನ್ಯಾಯಾಲಯದ ಮುಖಾಂತರ ವೈನ್ ಶಾಪ್ ಮತ್ತೆ ಬಂದ್ ಮಾಡುವುದಾಗಿ ತಿಳಿಸಿದ್ದರಿಂದ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಸಾರ್ವಜನಿಕರ ಪ್ರತಿಭಟನೆಗೆ ಅಂತ್ಯಸಿಕ್ಕಿದೆ.

 

By suddi9

Leave a Reply

Your email address will not be published. Required fields are marked *