ಗುರುಪುರ : ವ್ಯವಹಾರದಲ್ಲಿ ವಿಪರೀತ ಸಾಲ ಮಾಡಿ ಕೈಸೋತಿರುವ ಗುರುಪುರದ ಯುವಕನೊಬ್ಬ ನಿನ್ನೆಯಿಂದ ನಾಪತ್ತೆಯಾಗಿದ್ದು, ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾಪತ್ತೆಯಾದ ಯುವಕ ಗಿರೀಶ್(38) ಆಗಿದ್ದು ಈತ ಗುರುಪುರ, ಕೈಕಂಬ ಮತ್ತು ವಾಮಂಜೂರು ಪ್ರದೇಶದಲ್ಲಿ ಗ್ರಾಮೀಣ ಬ್ಯಾಂಕೊಂದರ ಪಿಗ್ಮಿ ಸಂಗ್ರಹ ಮಾಡುತ್ತಿದ್ದ.

naಕೆಲವು ವರ್ಷ ಇಲೆಕ್ಟ್ರೀಶನ್ ಆಗಿ ಕೆಲಸ ಮಾಡುತ್ತಿದ್ದ ಗಿರೀಶ್, ಇತ್ತೀಚೆಗೆ ವಾಮಂಜೂರಿನಲ್ಲಿ `ಶ್ರೀ ಅನ್ನಪೂಣೇಶ್ವರಿ’ ಕ್ಯಾಂಟೀನ್ ಇಟ್ಟುಕೊಂಡಿದ್ದ. ಎಲ್ಲ ಕಡೆಯಲ್ಲೂ ಸಾಲ ಮಾಡಿದ್ದ ಈತ ಮಿತಿಮೀರಿ ಮದ್ಯ ಸೇವಿಸುತ್ತಿದ್ದ. ವಿವಾಹವಾಗಿ ಪತ್ನಿಗೆ ವಿಚ್ಛೇದನ ನೀಡಿದ್ದ. ಸಾಲದ ಹೊರೆಯಿಂದ ಕಂಗಾಲಾಗಿದ್ದ ಈತ, ನಾಪತ್ತೆಗೆ ಮುಂಚೆ ಬರೆದಿರುವ ಪತ್ರದಲ್ಲಿ, “ಇನ್ನು ನಾನು ಯಾರಿಗೂ ಸಿಗುವುದಿಲ್ಲ. ನನ್ನನ್ನು ಸಂಪರ್ಕಿಸುವ ಪ್ರಯತ್ನ ಮಾಡಬೇಡಿ” ಎಂದಿದ್ದ. ಈ ಪತ್ರದೊಂದಿಗೆ ಸಹೋದರ ಕಮಲಾಕ್ಷ ದೂರು ನೀಡಿದ್ದಾರೆಂದು ಪೊಲೀಸರು ತಿಳಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಿರೀಶ್‍ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

By suddi9

Leave a Reply

Your email address will not be published. Required fields are marked *