ಮೂಡುಬಿದಿರೆ: ಕೇವಲ ಐದು ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಕ್ಲಬ್ ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದು ಕಡಿಮೆ ಅವಧಿಯಲ್ಲಿ ಪಾರಂಪರಿಕ ಹಿನ್ನೆಲೆಯ ಸ್ವಂತ ಕಟ್ಟಡವನ್ನು ನಿರ್ಮಿಸಿರುವುದು ಕ್ಲಬ್‍ನ ಸದಸ್ಯರ ಸಾಂಘಿಕ ಶಕ್ತಿಯ ಪ್ರತೀಕವಾಗಿದೆ. ಇದು ಕ್ಲಬ್‍ನ ಅಸ್ತಿತ್ವವನ್ನು ಮತ್ತಷ್ಟು ಎತ್ತರಕ್ಕೇರಿಸುತ್ತದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ರೋಹಿನಾಥ್ ಪಿ. ಹೇಳಿದರು. ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್‍ಟೌನ್ ವತಿಯಿಂದ ಕೀರ್ತಿನಗರದಲ್ಲಿರುವ ಟೆಂಪಲ್ ಟೌನ್ ಪಾರ್ಕ್‍ನಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ರೋಟರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

 

Rotary Temple Town (1)

Rotary Temple Town (2)
ಗಂಟಾಲ್ಕಟ್ಟೆಯ ನೀರಲ್ಕೆಯಲ್ಲಿ ಲಕ್ಷ್ಮೀ ಎಂಬವರ ಮನೆಗೆ 9 ಸಾವಿರ ವೆಚ್ಚದ ಸೋಲಾರ್ ದೀಪ, ಗಾಜಿಗಾರ ಪಲ್ಕೆಯ ಎರಡು ಕುಟುಂಬಗಳಿಗೆ 60 ಸಾವಿರ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ, ಕಾಪಿಕಾಡ್‍ನಲ್ಲಿ ಅಂಗನವಾಡಿಗೆ 80 ಸಾವಿರ ವೆಚ್ಚದಲ್ಲಿ ಟೈಲ್ಸ್, ವಿದ್ಯುತ್ ಸಂಪರ್ಕ, ಪೈಂಟಿಂಗ್ ಹಾಗೂ ಆಶಾ ಸ್ಪೂರ್ತಿ ಯೋಜನೆಯಡಿ ರಾಘವ ಶ್ಯಾನುಭೋಗ್ ಸ್ಮರಣಾರ್ಥ ಗಾಂಧಿನಗರ ಅಂಗನವಾಡಿಗೆ 22 ಸಾವಿರ ವೆಚ್ಚದ ಗ್ರಿಲ್ ಅಳವಡಿಕೆ ಹಾಗೂ ಬೆಳುವಾಯಿ ಕುಕ್ಕುಡೇಲುವಿನಲ್ಲಿ ಎರಡು ಕುಟುಂಬಗಳಿಗೆ 60 ಸಾವಿರ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯಗಳನ್ನು ರಾಜ್ಯಪಾಲ ರೋಹಿನಾಥ್ ವೀಕ್ಷಣೆ ನಡೆಸಿ ಫಲಾನುಭವಿಗಳಿಗೆ ಶೌಚಾಲಯ ಬಳಕೆಯ ಸಾಮಾಗ್ರಿಗಳ ಕಿಟ್‍ಗಳನ್ನು ವಿತರಿಸಿದರು.
ರೋಟರಿ ಜಿಲ್ಲಾ ಉಪ ರಾಜ್ಯಪಾಲ ಪ್ರಕಾಶ್ ಕಾರಂತ್, ಕಾರ್ಯದರ್ಶಿ ನಾರಾಯಣ ಹೆಗ್ಡೆ, ಮೂಡುಬಿದಿರೆ ರೋಟರಿ ಕ್ಲಬ್ ಟೆಂಪಲ್ ಟೌನ್‍ನ ಅಧ್ಯಕ್ಷ ವಿನ್ಸೆಂಟ್ ಡಿಕೋಸ್ತ, ಕಾರ್ಯದರ್ಶಿ ಡೆನ್ನಿಸ್ ಪಿರೇರ, ನಿಯೋಜಿತ ಅಧ್ಯಕ್ಷ ಡಾ.ಮಹಾವೀರ ಜೈನ್, ಮಾಜಿ ಅಧ್ಯಕ್ಷರಾದ ಉಮೇಶ್ ರಾವ್, ರಾಜೇಶ್ ಬಂಗೇರ, ಬಲರಾಮ್ ಕೆ.ಎಸ್. ಹಾಗೂ ಕ್ಲಬ್‍ನ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *