ಬೆಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಸಲುವಾಗಿ ಅತ್ಯಮೂಲ್ಯ ರ‌್ಯಾಂಕಿಂಗ್ ಅಂಕಗಳನ್ನು ಬದಿಗೊತ್ತಿದ್ದೇನೆ, ಇದು ದೇಶಕ್ಕಾಗಿ ನನ್ನ ಪುಟ್ಟ ತ್ಯಾಗ ಎಂದು ಇತ್ತೀಚೆಗಷ್ಟೇ ಅಮೆರಿಕ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿದ ಸಾನಿಯಾ ಮಿರ್ಜಾ  ಹೇಳಿದ್ದಾರೆ.ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದೆ, ಇದು ಅತ್ಯಂತ ಕಠಿಣ ನಿರ್ಧಾರ. ಆದ್ದರಿಂದಲೇ ಎಲ್ಲಿ ಸ್ಪರ್ಧಿಸಬೇಕೆಂಬ ನಿರ್ಧಾರವನ್ನು ರಾಷ್ಟ್ರೀಯ ಟೆನಿಸ್ ಸಂಸ್ಥೆಗೆ ಬಿಟ್ಟಿದ್ದೆ. ಒಂದೆಡೆ ವರ್ಷಾಂತ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ಡಬ್ಲ್ಯುಟಿಎ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊಟ್ಟ ಮೊದಲ ಆಟಗಾರ್ತಿ ಎಂದೆನಿಸಿಕೊಳ್ಳುವ ಅವಕಾಶ, ಮತ್ತೊಂದೆಡೆ ಏಷ್ಯನ್ ಗೇಮ್ಸ್‌ನಲ್ಲಿ ದೇಶಕ್ಕೆ ನನ್ನ ವೃತ್ತಿ ಬದುಕಿನ ಏಳನೇ ಪದಕ ತಂದು ಕೊಡುವಂತಹ ಸಂದರ್ಭ, ಈ ಎರಡರ ಮಧ್ಯೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಎದುರಾಗಿತ್ತು.  ಬಳಿಕ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಎಐಟಿಎ ಬೆಂಬಲಿಸಿತು. ಒಮ್ಮೆ ಈ ನಿರ್ಧಾರ ಪ್ರಕಟವಾದ ಬಳಿಕ, ಏಷ್ಯನ್ ಗೇಮ್ಸ್‌ನಲ್ಲಿ ನನ್ನ ದೇಶಕ್ಕೆ ಹಿನ್ನಡೆಯಾಗುವಂತೆ ಮಾಡಿದೆನೆಂಬ ಕೊರಗು ಕಾಡಲಾರಂಭಿಸಿತು. ಬಳಿಕ ದೀರ್ಘವಾಗಿ ಆಲೋಚಿಸಿ ಏಷ್ಯನ್ ಗೇಮ್ಸ್‌ನಲ್ಲಿ ಆಡುವ ಅಂತಿಮ ನಿರ್ಧಾರಕ್ಕೆ ಬಂದೆ. ಏಕೆಂದರೆ, ಏಷ್ಯನ್ ಗೇಮ್ಸ್‌ನಲ್ಲಿ ಆಡಿದ ನಂತರವೂ ಡಬ್ಲ್ಯುಟಿಎ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಸುವ ಅಲ್ಪ ಮಟ್ಟದ ಅವಕಾಶಗಳಿವೆ. ಹೀಗಾಗಿ ಈ ಸವಾಲನ್ನು ಸ್ವೀಕರಿಸಿದೆ ಎಂದು ಸಾನಿಯಾ ಮಿರ್ಜಾ ಪತ್ರಿಕೆಯೊಂದು ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.

 

 

sania

sania2


sania4

By suddi9

Leave a Reply

Your email address will not be published. Required fields are marked *