ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಮತ್ತು ಸಪರಿವಾರ ಶ್ರೀ ರಾಜರಾಜೇಶ್ವರಿ ದೇವರುಗಳಿಗೆ ಪ್ರಾತಃಕಾಲ 4ರಿಂದ ಪುಣ್ಯಾಹ, ಗಣಹೋಮ, ದ್ರವ್ಯಕಲಶಾಭಿಷೇಕ ನಡೆದು ಪೂರ್ವಾಹ್ನ 7.40ರಿಂದ 8.10ರ ಮೀನ ಲಗ್ನ ಸುಮುಹೂರ್ತದಲ್ಲಿ `ಬ್ರಹ್ಮಕಲಶಾಭಿಷೇಕ’ ನಡೆಯಿತು.
ಬಳಿಕ ನ್ಯಾಸ, 11.30ಕ್ಕೆ ಮಹಾಪೂಜೆ, ಮಧ್ಯಾಹ್ನ ಪಲ್ಲಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ, 12.30ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.