ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ಧೂಮಾವತಿ ಬಂಟ ಪರಿವಾರ ದೈವಗಳ ನವೀಕೃತ ಶಿಲಾಮಯ ದೈವಸ್ಥಾನದಲ್ಲಿ ಫೆ. 7ರಂದು ಬೆಳಿಗ್ಗೆ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ, ಅವರ ಪುತ್ರ ಹಾಗೂ ಅರ್ಚಕ ವೃಂದದಿಂದ `ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ’ ನೂರಾರು ಭಕ್ತರ ಸಮ್ಮುಖದಲ್ಲಿ ಆರಂಭವಾಯಿತು.7vpbhrammakalasa

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದೋಣಿಂಜೆಗುತ್ತು ಡಾ. ರವಿ ಶೆಟ್ಟಿ ಕತಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ. ಸುಕುಮಾರ ಶೆಟ್ಟಿ, 16 ಗುತ್ತುಮನೆತವರು, ಇತರ ಸಮಿತಿ ಅಧ್ಯಕ್ಷರು, ಗೌರವಾಧ್ಯಕ್ಷರು, ಸದ್ಸಯರು, ನೂರಾರು ಭಕ್ತರು ಉಪಸ್ಥಿತರಿದ್ದರು.7vai 017-2

ಸಡಗರ, ಶ್ರದ್ಧಾಪೂರ್ವಕ

ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ7-1

7vai2

ಒಂದೆಡೆ ಚೆಂಡೆ, ವಾದ್ಯ ನಾದವಾಗುತ್ತಿದ್ದರೆ, ಇನ್ನೊಂದೆಡೆ ಕದೋನಿ ಸುಡ್ಡುಮದ್ದು ನಾಲ್ಕೂರು ಮಂದಿಗೆ ಇಲ್ಲಿನ ಸಂಭ್ರಮ ಸಾರುವಂತಿತ್ತು. ದೈವಗಳಿಗೆ ಬ್ರಹ್ಮಕಲಶಾಭಿಷೇಕ, ಧ್ವಜಸ್ತಂಭ ಪ್ರತಿಷ್ಠಾಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ ಜರುಗಿತು. ಪೂಜಾ ಸಂದರ್ಭದಲ್ಲಿ ನೂರಾರು ಮಂದಿ ನೆರೆದಿದ್ದು, ಬಳಿಕ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು.7vay02

7vai1ದೈವಸ್ಥಾನ ಹೂವು, ಅಡಕೆ ಹಾಗೂ ತೋರಣಗಳಿಂದ ಅಲಂಕೃತಗೊಂಡಿದ್ದು, ಎಲ್ಲೆಡೆ ಮಲ್ಲಿಗೆ ಸುವಾಸನೆ ಬೀರುತ್ತಿತ್ತು. ಹೆದ್ದಾರಿ ಬದಿಯ ಶಾಶ್ವತ ಮಹಾದ್ವಾರದಲ್ಲಿ ಹೂವುಗಳಿಂದಲೇ ಬರೆಯಲಾದ `ಶ್ರೀ ವೈದ್ಯನಾಥಾಯ ನಮಃ’ ವಾಹನ ಪ್ರಯಾಣಿಕರ ಆಕರ್ಷಕ ಬಿಂದುವಾಗಿ ಗೋಚರಿಸುತ್ತಿತ್ತು. ದೈವಸ್ಥಾನದ ಸುತ್ತಲ ಪ್ರಾಂಗಣ ಮದುವಣಗಿತ್ತಿಯಂತೆ ಸಿಂಗರಿಸಲ್ಪಟ್ಟಿತ್ತು. ಹೊರಾಂಗಣದಲ್ಲಿ ತೆರೆಯಲಾಗಿದ್ದ ನೂರಾರು ಅಂಗಡಿ-ಸಂತೆ ಆಬಾಲವೃದ್ಧರ ಆಕರ್ಷಿಸುವಂತಿತ್ತು.

By Suddi9

Leave a Reply

Your email address will not be published. Required fields are marked *