ಕೈಕಂಬ: ಗ್ರಾಮಸಭೆಗಳಲ್ಲಿ ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸುವುದು ಮಾತ್ರವಲ್ಲ, ಅದಕ್ಕೆ ಆ ಸಭೆಯಲ್ಲಿಯೇ ಪರಿಹಾರ ಕಂಡುಕೊಳ್ಳಲು ಆಗಬೇಕು ಎಂದು ಕುಪ್ಪೆಪದವು ಗ್ರಾ.ಪಂ. ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಹೇಳಿದ್ದಾರೆ.
ಅವರು ಗುರುವಾರ ನಡೆದ ಮಹಿಳಾ ಗ್ರಾಮಸಭೆಯನ್ನು ಉದ್ದೇಶಿಸಿ ಈ ಕುರಿತಗಿ ಮಾತಾಡುತ್ತಿದ್ದರು.
ಲೈಂಗಿಕ ದೌರ್ಜನ್ಯದಂಥಾ ಸಮಸ್ಯೆಗಳು ಎಲ್ಲೋ ದೂರದಲ್ಲಿ ಮಾತ್ರ ನಡೆಯುತ್ತಿದೆ ಎಂದುಕೊಂಡಿದ್ದೆ. ಆದರೆ ಬ್ರೇಕ್ ಥ್ರೂ ಸಂಸ್ಥೆ ಹಮ್ಮಿಕೊಂಡ ತರಬೇತಿಯಲ್ಲಿ ಸಮ್ಮ ಸುತ್ತಮುತ್ತಲೂ ಇಂಥಾ ದೌರ್ಜನ್ಯಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದು ಆಶ್ಚರ್ಯವಾಯಿತು. ಈ ನಿಟ್ಟಿನಲ್ಲಿ ನಾವೆಲ್ಲರೂ ಬಹಳಷ್ಟು ಗಮನಹರಿಸುವುದು ಅತೀಮುಖ್ಯ ಎಂದು ಅವರು ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಶ್ಯಾಮಲ ಸಿ.ಕೆ ಮಾತಾಡುತ್ತಾ ಮಹಿಳೆಯರ ಮೇಲೆ ದೌರ್ಜನ್ಯ ಆದಾಗ ಅದನ್ನು ಇಲಾಖೆಗೆ ತಿಳಿಸಬೇಕು ಎಂದರು.
ಬ್ರೇಕ್ಥ್ರೂ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಮಂಜುಳಾ ಸುನಿಲ್ ಮತ್ತು ಭತ್ ಎಸ್ ಕರ್ಕೇರಾ ಮಾಹಿತಿ ವಿನಿಮಯ ಕಾರ್ಯ ನಡೆಸಿಕೊಟ್ಟರು. ಕಲಾವಿದೆ ಸುನಿಲಾ ಜಾರಂದಗುಡ್ಡೆ ಇವರ ತಂಡ ಲೈಂಗಿಕ ದೌರ್ಜನ್ಯದ ಬಗೆಗಿನ `ನೀಲಿರಿಬ್ಬನ್’ ನಾಟಕ ನಡೆಸಿಕೊಟ್ಟರು. ಸಂಚಯದ ಹರಿಣಿಯವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಪುಷ್ಪಾ ನಾಯ್ಕ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪುಷ್ಪಾ ಸಾಲ್ಯಾನ್ ಸ್ವಾಗತಿಸಿದರು. ಮೇಲ್ವಿಚಾರಕಿ ಉಷಾ ಧನ್ಯವಾದ ಅರ್ಪಿಸಿದರು. ಕು.ಮಾಲಿನಿ ಕಾರ್ಯಕ್ರಮ ನಿರೂಪಿಸಿದರು




