ಮುಂಬಯಿ: ಎಳವೆಯಲ್ಲೇ ಮುಂಬಯಿಗೆ ಆಗಮಿಸಿ ಹಗಲಿರುಳು ಶ್ರಮಿಸಿ ರಾತ್ರಿ ಶಾಲೆಯಲ್ಲಿ ಅಭ್ಯಾಸಿಸಿ, ಓರ್ವ ಸ್ವಾತಂತ್ರ್ಯ ಹೋರಾಟಗಾರನಾಗಿ ಕ್ವಿಟ್ ಇಂಡಿಯಾ ಸಹಿತ ವಿವಿಧ ಚಳುವಳಿಗಳಲ್ಲಿ ಭಾಗವಹಿಸಿ, ಕೃಷ್ಣ ಮೆನನ್ ಅವರ ಆಪ್ತ ಸಹಾಯಕರಾಗಿ, ದೊಡ್ಡ ಮಟ್ಟದ ಹೋರಾಟಗಳನ್ನು ಸಂಘಟಿಸಿದ ಮೂಡುಬೆಳ್ಳೆಯ ಪಂಡಿತ್ ಎಸ್.ಕೆ ಸುವರ್ಣ ಅವರು 1993ರ ಡಿ.20ರಂದು ಮುಂಬಯಿಯಲ್ಲಿ ಇಹಲೋಕ ತ್ಯಜಿಸಿದ್ದು ಅವರ 25ನೇ ಸಂಸ್ಮರಣೆ ಕಾರ್ಯಕ್ರಮವವನ್ನು ಅವರ ಕರ್ಮಭೂಮಿ ಆಗಿರುವ ಮುಂಬಯಿನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಇದೇ ಡಿ.20-23ರ ಮೂರು ದಿನಗಳಲ್ಲಿ ಭಾಂಡೂಪ್ ಪಶ್ಚಿಮದ ಎಲ್‍ಬಿಎಸ್ ರಸ್ತೆಯಲ್ಲಿನ ಶ್ರೀ ನಿತ್ಯಾನಂದ ಮಂದಿರದಲ್ಲಿ ಆಯೋಜಿಸಲಾಗಿದೆ.Pdt. S. K Suvarna (3)

ಸ್ವಾತಂತ್ರ್ಯದ ನಂತರ ವಜ್ರೇಶ್ವರಿ ಅಲ್ಲಿನ ಶ್ರೀ ನಿತ್ಯಾನಂದ ಸ್ವಾಮೀ ಮತ್ತು ಕೊಲ್ಕತ್ತಾದ ಗಂಗಾಪ್ರಸಾದರ ಸನ್ಯಾಸಿಯಾಗಿ ಶಿಷ್ಯತ್ವ ಸ್ವೀಕರಿಸಿದ್ದ ಸುವರ್ಣರು, ಧಾರ್ಮಿಕ ರಂಗದ ಪಂಡಿತ ಗುರುವಾಗಿ, ಪಾರಂಪರಿಕ ವೈದ್ಯನಾಗಿ, ಉದ್ಯಮಿಯಾಗಿ ಮುಂಬಯಿ ಹಾಗೂ ಬೆಳ್ಳೆಯಲ್ಲಿ ಜನಹಿತ ಕಾರ್ಯ ನಡೆಸಿದ್ದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಭಾಂಡೂಪ್ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷರಾಗಿ, ಭಾರತ್ ಕೋ ಅಪರೇಟಿವ್ ಬ್ಯಾಂಕ್‍ನ ಸ್ಥಾಪಕ ನಿರ್ದೇಶಕರಾಗಿ, ಬೆಳ್ಳೆ ಬಿಲ್ಲವ ಸಂಘದ ಸ್ಥಾಪಕರಾಗಿ, ಆದಿ ಉಡುಪಿಯ ಶ್ರೀ ಬ್ರಹ್ಮಬೈದರ್ಕಳ ಅಧ್ಯಯನ ಪ್ರತಿಷ್ಠಾನ, ಬೆಳ್ಳೆ ಗೀತಾಮಂದಿರದ ಸ್ಥಾಪಕ ಟ್ರಸ್ಟಿ ಮತ್ತು ಸಲಹೆಗಾರರಾಗಿಯೂ ಸೇವೆ ಸಲ್ಲಿಸಿರುವರು.Pdt. S. K Suvarna (2)
ಮುಂಬಯಿ, ಉಡುಪಿ, ದ.ಕ. ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ, ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳಿಗೆ ಪಂಡಿತರು ಕೊಡುಗೈ ದಾನಿಯಾಗಿ ಬೆಂಬಲವಿತ್ತವರು.1950ರ ದಶಕದಲ್ಲಿ ಮುಂಬಯಿನ ಭಾಂಡೂಪ್‍ನಲ್ಲಿ ಶ್ರೀ ನಿತ್ಯಾನಂದ ಆಶ್ರಮ ಸ್ಥಾಪಿಸಿದ್ದು ಅದೇ ಆಶ್ರಮ ಇಂದು ಮುಂಬಯಿಯ ಪ್ರಸಿದ್ಧ ಮಂದಿರಗಳಲ್ಲಿ ಒಂದಾಗಿ ಭಾಂಡೂಪ್‍ನ ಸ್ವಾಮಿ ನಿತ್ಯಾನಂದ ಮಂದಿರವಾಗಿ ಮೆರೆಯುತ್ತಿದೆ.ಮೂಡುಬೆಳ್ಳೆ ಕಪ್ಪಂದಕರಿಯದಲ್ಲಿ 1960ರಲ್ಲಿ ಶ್ರೀ ನಿತ್ಯಾನಂದ ಆಶ್ರಮ ಸ್ಥಾಪಿಸಿದರು. ಮೂಡುಬೆಳ್ಳೆಗೆ ವಿದ್ಯುತ್, ದೂರವಾಣಿ ಸೌಕರ್ಯ ಒದಗಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿ, ಬೆಳ್ಳೆ ವ್ಯವಸಾಯ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಪಡುಬೆಳ್ಳೆಯ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಶ್ರಮಿಸಿದವರಲ್ಲಿ ಸುವರ್ಣರು ಅಗ್ರಮಾನ್ಯರು.ಡಿಸೆಂಬರ್ ಕೊನೆಯ ವಾರದಲ್ಲಿ ಅವರ ತವರೂರು ಉಡುಪಿ ಪಡುಬೆಳ್ಳೆ ಅಲ್ಲಿನ ನಾರಾಯಣಗುರು ಶಾಲೆಯಲ್ಲಿ ಸಂಸ್ಮರಣಾ ಸಪ್ತಾಹ ಜರಗಲಿದೆ. Pdt. S. K Suvarna (1)

By suddi9

Leave a Reply

Your email address will not be published. Required fields are marked *