ಮುಂಬೈ: ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಅವರು ಮುಂಬೈನಲ್ಲಿ ಶುಕ್ರವಾರ ಹಿಂದೂ ಸಾಂಪ್ರಾದಾಯದ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆಯ ನಂತರ ಸೈನಾ ತಮ್ಮ ವಿವಾಹದ ಫೋಟೋವನ್ನು ಹಾಕಿ ಜಸ್ಟ್ ಮ್ಯಾರೀಡ್ ಎಂದು ಹ್ಯಾಶ್ ಟ್ಯಾಗ್‍ನಲ್ಲಿ ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕಿಂತ ಮೊದಲೇ ಇವರಿಗೆ ಮದುವೆಯಾಗಿದ್ದು, ಇಂದು ಕಶ್ಯಪ್ ಅವರ ಜೊತೆ ಕೈಹಿಡಿದು, ಕುಟುಂಬ ಸದಸ್ಯರು ಈ ಸಂಭ್ರಮದಲ್ಲಿ ಪಾಲ್ಗೋಡಿದ್ದರು ಎನ್ನಲಾಗಿದೆ.
ಸೈನಾ ಹಾಗೂ ಕಶ್ಯಪ್ ಅವರ ಪ್ರೇಮ ವಿಚಾರವನ್ನು ಸೈನಾ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
