aravind
ದೆಹಲಿ: ಗ್ಯಾಸ್ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಇಂಧನ ಸಚಿವ ವೀರಪ್ಪ ಮೊಲಿ, ಮಾಜಿ ಸಚಿವ ಮುರಳಿ ದಿಯೊರಾ, ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ಹೈಡ್ರೋಕಾರ್ಬನ್ಸ್ನ ಮಾಜಿ ನಿದರ್ೇಶಕ ವಿ.ಕೆ ಸಿಬಲ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಎಸಿಬಿಗೆ ಆದೇಶ ನೀಡಿದ್ದಾರೆ.
ಸರಕಾರದ ನಿರ್ಣಯದಿಂದಾಗಿ ರಿಲಾಯನ್ಸ್ ಸಂಸ್ಥೆಗೆ ರೂ. 54,000 ಕೋಟಿ ಲಾಭವಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಈ ಕಾರಣಕ್ಕಾಗಿ ಈ ನಾಲ್ವರ ಮೇಲೆ ಎಫ್ಐಆರ್ ದಾಖಲಿಸಲು ಅಪರಾಧ ನಿಗ್ರಹದಳದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ. ಮಾಜಿ ಸಂಪುಟ ಕಾರ್ಯದಶರ್ಿ ಟಿ.ಎಸ್.ಆರ್ ಸುಬ್ರಹ್ಮಣ್ಯನ್, ಮಾಜಿ ನೌಕಾಪಡೆ ಅಧಿಕಾರಿ ಆರ್.ಎಚ್ ತಹಿಲಿಯನ್, ಹೆಸರಾಂತ ನ್ಯಾಯವಾದಿ ಕಾಮಿನಿ ಜೈಸ್ವಾಲ್ ಮತ್ತು ಇ.ಎಸ್ ಶಮರ್ಾ ಮುಂತಾದವರಿಂದ ಸರಕಾರಕ್ಕೆ ಈ ಬಗ್ಗೆ ದೂರುಗಳು ಬಂದಿದ್ದು ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ರಿಲಾಯನ್ಸ್ ಸಂಸ್ಥೆಯು ರಾಷ್ಟ್ರೀಯ ಥರ್ಮಲ್ ಪವರ್ ಸಂಸ್ಥೆಯಿಂದ ಅತ್ಯಂತ ಕಡಿಮೆ ದರದಲ್ಲಿ ಅನಿಲ ಖರೀದಿಸುತ್ತದೆ ಆದರೆ ಅದನ್ನು ದುಬಾರಿ ದರದಲ್ಲಿ ಗ್ರಾಹಕರಿಗೆ ನೀಡುತ್ತದೆ. ಎಪ್ರಿಲ್ನಲ್ಲಿ ಮತ್ತೊಮ್ಮೆ ಗ್ಯಾಸ್ ದರ ಏರಿಸಲು ಸಿದ್ಧತೆಗಳು ನಡೆಯುತ್ತಿವೆ. ಹೀಗಾದಲ್ಲಿ ಅದು ಮತ್ತಷ್ಟು ಹೆಚ್ಚಿನ ಹಣದುಬ್ಬರಕ್ಕೆ ಎಡೆಮಾಡಲಿದೆ ಎಂದವರು ಹೇಳಿದ್ದಾರೆ.

By Suddi9

Leave a Reply

Your email address will not be published. Required fields are marked *