ರೈಲ್ವೇ ಬಜೆಟ್: 73 ಹೊಸ ರೈಲ್ ಬಿಟ್ಟ ಖಗರ್ೆ, ದರದಲ್ಲಿ ಬದಲಾವಣೆ ಇಲ್ಲ.
ಸುದ್ದಿ9ದೆಹಲಿ: ಮಹಾ ಚುನಾವಣೆ ಸಮೀಪಿಸುತ್ತಿರುವ ಕಾರಣ ಕೇಂದ್ರ ರೈಲ್ವೇ ಸಚಿವ ಮಲ್ಲಿಕಾಜರ್ುನ ಖಗರ್ೆ ಮಂಡಿಸಲಿರುವ ರೈಲ್ ಬಜೆಟ್ ಜನಸ್ನೇಹಿಯಾಗಿರಬಹುದು ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಅದರಂತೆ ನಡೆದ ಖಗರ್ೆ ಮುಖ್ಯವಾಗಿ ರೈಲು ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಪ್ರಯಾಣಿಕರನ್ನು ಸಂತುಷ್ಟಗೊಳಿಸಲು ಯತ್ನಿಸಿದ್ದಾರೆ.
ತನ್ನ ಸಂಕ್ಷಿಪ್ತ ರೈಲ್ ಬಜೆಟ್ ಮಂಡಿಸಿದ ಖಗರ್ೆ ಒಟ್ಟಾರೆಯಾಗಿ 73 ಹೊಸ ರೈಲುಗಳನ್ನು ಇಳಿಸುವ ಪ್ರಸ್ತಾಪ ಮಾಡಿದ್ದಾರೆ. ಆದರೆ ರೈಲ್ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಮಾಡುವ ಗೋಜಿಗೆ ಖಗರ್ೆ ಹೋಗಲಿಲ್ಲ. ಈ ಮಧ್ಯೆ ತೆಲಂಗಾಣ ವಿರೋಧಿ ಶಾಸಕರು ಬಜೆಟ್ ಮಂಡಣೆಯ ನಡುವೆ ವಾಗ್ವಾದಕ್ಕೆ ಇಳಿದು ಸದನದ ಆವರಣದಲ್ಲಿರುವ ಬಾವಿಯ ಬಾಳಿ ಓಡಿ ಹೋದ ಘಟನೆ ಸಂಭವಿಸಿದ ಕಾರಣ ಬಜೆಟ್ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಮಧ್ಯಾಹ್ನ ಎರಡು ಗಂಟೆಯವರೆಗೆ ಕಲಾಪವನ್ನು ಮುಂದೂಡಲಾಯಿತು. ಇದರಿಂದ ತಮ್ಮ ಬಜೆಟ್ ಭಾಷಣ ಸಿದ್ಧಪಡಿಸಿಕೊಂಡು ಬಂದಿದ್ದ ಖಗರ್ೆ ತಮ್ಮ ಭಾಷಣವನ್ನು ಅರ್ಧ ಮಾತ್ರ ಓದುವಂತಾಯಿತು.

