ಕೈಕಂಬ : ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುಪುರ ಗುರುನಗರದ ಇದರ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ 2018-19ನೇ ಸಾಲಿನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಮಹಾಬಲ ಅಮೀನ್ ಗುರುಪುರ ಆಯ್ಕೆಯಾದರು.gur-oct-29-mahabala

ಭೋಜ ಸುವರ್ಣ ಪೊನ್ನೆಲ(ಉಪಾಧ್ಯಕ್ಷ), ದೀಪಕ್ ಬಂಗೇರ ಮಾಣಿಬೆಟ್ಟು(ಪ್ರಧಾನ ಕಾರ್ಯದರ್ಶಿ), ಮಾಧವ ಸುವರ್ಣ ಸಾದೂರು(ಜೊತೆ ಕಾರ್ಯದರ್ಶಿ), ಶೀನ ಕೋಟ್ಯಾನ್ ಬಳ್ಳಿ(ಖಜಾಂಚಿ), ಸುರೇಶ್ ಅಮೀನ್ ಚಿಲಿಂಬಿಗುಡ್ಡೆ(ಸಂಘಟನಾ ಕಾರ್ಯದರ್ಶಿ) ಪದಾಧಿಕಾರಿಗಳಾಗಿ ನೇಮಕಗೊಂಡರು. ಹಿರಿಯ ಸಲಹೆಗಾರರಾಗಿ ಚಂದ್ರಶೇಖರ್ ಬಳ್ಳಿ ಮತ್ತು ದೇವದಾಸ ಅಂಚನ್ ಬೆಜ್ಜಿಬೆಟ್ಟು ಹಾಗೂ 28 ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ನೂತನ ಅಧ್ಯಕ್ಷ ಅಮೀನ್ ಪದನಿಮಿತ್ತ ಅಧ್ಯಕ್ಷ ಸುಧಾಕರ ಅಮೀನ್ ಮತ್ತು ಪದಾಧಿಕಾರಿಗಳು ಸಂಘದ ಅಭಿವೃದ್ಧಿಗಾಗಿ ನಡೆಸಿರುವ ಕೆಲಸಗಳ ಕುರಿತು ಅಭಿನಂದಿಸಿದರು.

ಸಭೆಯಲ್ಲಿ ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು, ಧೂಮಾವತಿ ಪಾತ್ರಿ ತನಿಯಪ್ಪ ಪೂಜಾರಿ, ಧೂಮಾವತಿ ಬಂಟ ಪೂಜಾರಿ ಕರಿಮನೆ ಸೀತಾರಾಮ ಪೂಜಾರಿ ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *