ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನಕ್ಕೆ ಭಾನುವಾರ ಸಂಜೆ ನೂರಾರು ಭಕ್ತ ಸಮುದಾಯದ ಜಯಘೋಷದೊಂದಿಗೆ ನೂತನ ಧ್ವಜಸ್ತಂಭ(ಕೊಡಿಮರ) ಮರದ ಅದ್ದೂರಿ ಮೆರವಣಿಗೆ ಮೂಲಕ ತರಲಾಯಿತು.
ಮೂಡಬಿದ್ರಿ ಮಾರ್ಗವಾಗಿ ತರಲಾದ ಕೊಡಿಮರದ ಮೆರವಣಿಗೆಯು ಭಾನುವಾರ ಗಂಜಿಮಠದ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಿಂದ ಆರಂಭವಾಯಿತು. ಚೆಂಡೆ, ಬ್ಯಾಂಡ್ ವಾದನದ ಮೆರವಣಿಗೆಯಲ್ಲಿ ಗುರುಪುರ ಕುಕ್ಕದಕಟ್ಟೆಯಲ್ಲಿ ಜೀರ್ಣೋದ್ಧಾರ ಹಂತದಲ್ಲಿರುವ ದೈವಸ್ಥಾನಕ್ಕೆ ಕೊಡಿಮರ ಸಾಗಿ ಬಂದ ದಾರಿಯುದ್ದಕ್ಕೂ ಅಲ್ಲಲ್ಲಿ ಭಕ್ತ ಜನರು ಮೆರವಣಿಯಲ್ಲಿದ್ದವರಿಗೆ ಪಾನಕ, ಉಪಹಾರ ಹಾಗೂ ನೀರು ಪೂರೈಸಿದರು.
ನೂತನ ಕೊಡಿಮರ ಸುಮಾರು 47 ಅಡಿ ಉದ್ದ ಹಾಗೂ ನಾಲ್ಕೂವರೆ ಅಡಿ ಸುತ್ತಳತೆಯ ಬೋವಿನ ಮರವಾಗಿದೆ. ಕೊಡಿಮರ ಮೆರವಣಿಗೆಯಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಮೋದ್ ರೈ, ದೈವ ಪಾತ್ರಿಗಳಾದ ಚಂದ್ರಹಾಸ ಪೂಜಾರಿ ಕೌಡೂರು, ತನಿಯಪ್ಪ ಪೂಜಾರಿ, ಪುರಂದರ ಮಲ್ಲಿ, ವಿಲಾಸ್ ಶೆಟ್ಟಿ, ಪುರುಷೋತ್ತಮ ಮಲ್ಲಿ, ಪದ್ಮನಾಭ ಶೆಟ್ಟಿ, ತಾಪಂ ಸದಸ್ಯ ಸಚಿನ್ ಅಡಪ, ಚಂದ್ರಹಾಸ ಕಾವ, ರೋಹಿತಾಶ್ವ ಭಂಡಾರಿ, ಬಾಬು ಸಾಲ್ಯಾನ್, ತುಕಾರಾಮ ಪೂಜಾರಿ, ಬೆಳ್ಳಿಬೆಟ್ಟು ಸತೀಶ್ ಶೆಟ್ಟಿ, ಸತೀಶ್ ಕಾವ, ಡಾ. ರವಿರಾಜ ಶೆಟ್ಟಿ, ರಾಜು ಶೆಟ್ಟಿ, ವಿಷ್ಣು ಕಾಮತ್, ಪಾಂಡುರಂಗ ಪ್ರಭು, ರವಿ ಶೆಟ್ಟಿ ಶೆಟ್ಟಿ, ನಳಿನಾಕ್ಷಿ ಶೆಟ್ಟಿ, ಸೇಸಮ್ಮ ಮೊದಲಾದವರು ಇದ್ದರು.
