ಬಂಟ್ವಾಳ: ಬಂಟ್ವಾಳ ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ, ( ರಿ)ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಇದರ ವಾರ್ಷಿಕ ಮಹಾಸಭೆ ಅ.6 ಶನಿವಾರ ಬೆಳಿಗ್ಗೆ 10 ಗಂಟೆಗೆ ರೋಟರಿ ಬಾಲಭವನ ಬಿಸಿರೋಡ್ ಇಲ್ಲಿ ನಡೆಯಲಿದೆ ಎಂದು ಬಂಟ್ವಾಳ ಸಿ.ಡಿ.ಪಿ.ಒ. ಮಲ್ಲಿಕಾ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಬ್ಲಾಕ್ ಸೊಸೈಟಿ ಯ ಸದಸ್ಯ ತ್ವ ಪಡೆದ ಸದಸ್ಯರು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿ ಸಭೆ ಕಲಾಪಗಳನ್ನು ನಡೆಸಿಕೊಡಬೇಕು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ 2018-19 ಸಾಲಿನ ನೂತನ ಕಾರ್ಯ ಕಾರಿ ಸಮಿತಿ ಅಯ್ಕೆ ನೆಡಯಲಿದೆ. ಇದೇ ಸಂದರ್ಭದಲ್ಲಿ ಬ್ಲಾಕ್ ಸೊಸೈಟಿ ಯ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ರಂಗ ದ ಪ್ರತಿಭಾ ಪುರಸ್ಕಾರ ನಡೆಯಲಿದೆ.
