ಬಂಟ್ವಾಳ: ವಿಧಾನಪರಿಷತ್ ನ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿಯವರ ಅನುದಾನದ ಸಜಿಪಮೂಡ ಕಂದೂರಿನಲ್ಲಿ ಹೈಮಾಸ್ಕ್ ದೀಪವನ್ನು ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೋಕಾರ್ಪಣೆಗೊಳಿಸಿದರು.

high mask deepa (2)
ಯುವಕ ಸಂಘದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಳೆದ ಬಾರಿ ದಿ. ಶರತ್ ಮಡಿವಾಳರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶರತ್ ನೆನಪಿಗಾಗಿ ನನ್ನ ಅನುದಾನದಲ್ಲಿ ಹೈಮಾಸ್ಕ್ ದೀಪ ಅಳವಡಿಕೆಗೆ ನಿರ್ಧರಿಸಿದ್ದೆ ಆ ಮೂಲಕ ಕತ್ತಲಲ್ಲಿರುವ ಈ ಭಾಗದ ಜನರಲ್ಲಿ ಹೊಸ ಬೆಳಕನ್ನು ಮೂಡಿಸುವ ಪ್ರಯತ್ನವಾಗಿ ಈ ದಿನ ಹೈಮಾಸ್ಕ್ ದೀಪವನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ಹೇಳಿದರು.

high mask deepa (1)
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಸಜಿಪಮುನ್ನೂರು ಮತ್ತು ಸಜಿಪಮೂಡದಲ್ಲಿ ಜನತೆಗೆ ಬೇಕಾಗುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

high mask deepa (3)
ಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರ ಉಪಾಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ,ಬಂಟ್ವಾಳ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಸಜಿಪಮೂಡ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ ,ತಾಲ್ಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರು, ಸಜಿಪಮೂಡ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾದ ಸುರೇಶ್ ಪೂಜಾರಿ, ಹಿರಿಯರಾದ ತನಿಯಪ್ಪ ಮಡಿವಾಳ, ಮೋಹನ್ ಪಿ.ಎಸ್, ಶ್ರೀನಾಥ್ ಶೆಟ್ಟಿ, ಸೀತಾರಾಮ ಅಗಳಿಬೆಟ್ಟು, ನವೀನ್ ಅಂಚನ್, ಸುಮತಿ ಗಿರಿಜಾ ನಾಯಕ್, ವೀರೇಂದ್ರ ಕುಲಾಲ್, ಎನ್ ಕೆ ಶಿವ,ಇದಿನಬ್ಬ ನಂದಾವರ, ಪ್ರವೀಣ ಗಟ್ಟಿ, ರೂಪೇಶ್ ಆಚಾರ್ಯ, ನರಿಕೊಂಬು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಬಿಜೆಪಿ ಕ್ಷೇತ್ರ ಕಾರ್ಯದರ್ಶಿ ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಸುರೇಶ್ ಶೆಟ್ಟಿ ಕೋಯ ಮಜಲು, ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ದಯಾನಂದ ಬಿ.ಎಂ, ಶ್ರೀಮತಿ ಪ್ರಮೀಳಾ ಗಣೇಶ್, ಯಶವಂತ ನಗ್ರಿ ,ಸುರೇಶ್ ಕೋಟ್ಯಾನ್ ನರಿಕೊಂಬು ,ಮನೋಜ್ ತುಂಬೆ,ಬಾಲಕೃಷ್ಣ ಸೆರ್ಕಳ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *