ಬಂಟ್ವಾಳ: ಇಲ್ಲಿನ ಸಿದ್ದಕಟ್ಟೆಯಲ್ಲಿ ನೂತನವಾಗಿ ಅಸ್ತಿತ್ವಗೊಂಡ ಪೂಂಜ ಯಕ್ಷ ಮಿತ್ರರು ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಸಂಸ್ಮರಣೆ ಹಾಗೂ ತಾಳಮದ್ದಳೆ ಕೂಟ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಮಂಗಳವಾರ ಸಂಜೆ ಬಿಡುಗಡೆಗೊಳಿಸಲಾಯಿತು.
ಅ.21ರಂದು ಮಧ್ಯಾಹ್ನ ಗಂಟೆ 1.30ರಿಂದ ಸಂಜೆತನಕ ಇಲ್ಲಿನ ಹರ್ಷಲಿ ಸಭಾಂಗಣದಲ್ಲಿ ಸಂಘಟನೆ ಉದ್ಘಾಟನೆ ಮತ್ತು ದಿವಂಗತ ರಾಮಚಂದ್ರ ಆಚಾರ್ಯ ಮತ್ತು ದಿವಂಗತ ಅನಂತ ಆಚಾರ್ಯ ಸಂಸ್ಮರಣೆ ಹಾಗೂ ‘ಶರಸೇತು ಬಂಧನ’ ಮತ್ತು ‘ಸಾರಥ್ಯ ತ್ಯಾಗ-ಕರ್ಣಾವಸಾನ’ ತಾಳಮದ್ದಳೆ ಕೂಟ ನಡೆಯಲಿದೆ. ಇದೇ ವೇಳೆ ಕಲಾವಿದರಾದ ಗಣೇಶ ಶರ್ಮ ಕೀರಿಕ್ಕಾಡು ಮತ್ತು ಪದ್ಮನಾಭ ಶೆಟ್ಟಿಗಾರ್ ಸಿದ್ಧಕಟ್ಟೆ ಇವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕ ಹರಿಪ್ರಸಾದ್ ಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಶ್ರೀಪ್ರಕಾಶ್ ಜೈನ್ ಜಂಕಳ, ವಕೀಲ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಪರಮೇಶ್ವರ ಹೊಳ್ಳ, ಸದಾಶಿವ ಶೆಟ್ಟಿಗಾರ್, ರತ್ನಾಕರ ಶೆಟ್ಟಿ ಹೊಕ್ಕಾಡಿಗೋಳಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಗೋಪಾಲ ಬಂಗೇರ, ಪ್ರಭಾಕರ ಪ್ರಭು, ರಾಘವೇಂದ್ರ ಭಟ್, ಸಚ್ಚಿದಾನಂದ ಶೆಟ್ಟಿ, ಜನಾರ್ದನ ತಿಮರಡ್ಡ, ಬೇಬಿ ಶೆಟ್ಟಿ, ಹರೀಶ್ ಹಿಂಗಾಣಿ, ಸತೀಶ್ ಹಲಕ್ಕೆ, ಸಂತೋಷ್ ಕುಮಾರ್ ಚೌಟ, ಸುಂದರ ಭಂಡಾರಿ, ರಾಧಾಕೃಷ್ಣ ಶೆಟ್ಟಿ, ದುರ್ಗಾದಾಸ್ ಶೆಟ್ಟಿ, ಮಾಧವ ಶೆಟ್ಟಿಗಾರ್, ಮಹಾಬಲ ಶೆಟ್ಟಿ, ಆನಂದ ಬೃಂದಾವನ, ಪ್ರಭಾಕರ, ಭೋಜರಾಜ್ ಜೈನ್, ಸತೀಶ್, ಉಮೇಶ್ ಮಂಚಕಲ್ಲು, ರವಿ ಕುರ್ಡಾಡಿ, ದಾಮೋದರ ಶೆಟ್ಟಿಗಾರ್, ಟಿ. ನರಸಿಂಹ ಪೈ, ಅಬ್ದುಲ್ ಬಶೀರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹರೀಶ್ ಶೆಟ್ಟಿ ಸ್ವಾಗತಿಸಿ, ಬೂಬ ಮಾಸ್ತರ್ ಪ್ರಾಸ್ತಾವಿಕ ಮಾತನಾಡಿದರು. ಗಣೇಶ್ ಶೆಟ್ಟಿ ಮತ್ತು ಉಮೇಶ್ ಪಾಲ್ಯ ಕಾರ್ಯಕ್ರಮ ನಿರೂಪಿಸಿದರು.
