ಪೊಳಲಿ:ಬಡಗಬೆಳ್ಳೂರು ಕೊಳತ್ತಮಜಲು ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮದಲ್ಲಿ ನೇ ಅಂಗವಾಗಿ ಸೆ.22ರಿಂದಸೆ.23ರ ಭಾನುವಾರದವರೆಗೆ 164 ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯು ಪುರೋಹಿತ ಎಂ.ಲೋಕೇಶ್ ಶಾಂತಿ ಪೂಜಾವಿಧಿವಿಧಾನಗಳು ನಡೆಯಲಿದೆ.
*22ರಂದು. ಏಕಾಹ ಭಜನಾ ಉದ್ಘಾಟನೆಯನ್ನು ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಗಂಗಾಧರ ಜೆ. ಪೂಜಾರಿ ವಹಿಸಲಿದ್ದಾರೆ.
*ಸೆ. 22 ರಂದು ಶನಿವಾರ ಬೆಳಗ್ಗೆ7 ರಿಂದ 8 ಗಂಟೆಯವರೆಗೆ ಗಣಹೋಮ. ಬೆಳಗ್ಗೆ 8 ಗಂಟಡಯಿಂದ ಮರುದಿನ ಬೆಳಗ್ಗೆ 8 ಗಂಟೆಯವರೆಗೆ ನಾನಾ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ.
* ಸೆ.23ರಂದು ಬೆಳಗ್ಗೆ 9ರಿಂದ 10 ರವರೆಗೆ ಕಲಶಾಭಿಷೇಕ ಮದ್ಯಾಹ್ನ 12 ಗಂಟೆಗೆ ಮಹಾಪೂಜೆ ಪ್ರಸಾದ ವಿತರಣೆ 1 ರಿಂದ ಅನ್ನಸಂತರ್ಪಣೆ ಜರುಗಲಿದೆ.ಎಂದು ಪಂಚಗ್ರಾಮ ಬಿಲ್ಲವ ಸಂಘದ ಅಧ್ಯಕ್ಷ ಗಂಗಾಧರ ಜೆ.ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
