ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ, ಅಮ್ಮುಂಜೆ ಬಡಗಬೆಳ್ಳೂರು ಗ್ರಾಮದಲ್ಲಿ ಸಾವಿರಾರು ಬಿಎಸ್‍ಎನ್‍ಎಲ್ ಮೊಬೈಲ್ ಗ್ರಾಹಕರಿದ್ದು ಇಲ್ಲಿನ ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಸಿಗ್ನಲ್ ಮಾತ್ರ ಊಟಕ್ಕಿಲ್ಲ ಉಪ್ಪಿನಕಾಯಿಯಂತಾಗಿದೆ.ಇಲ್ಲಿಯ ಪೊಳಲಿ, ಮಣಿಕಂಠಪುರ, ಕೃಷ್ಣನಗರ,ಮಂಗಾಜೆ ಗಾಣೆಮಾರ್, ಪುಂಚಮೆ, ಕಲ್ಲಗುಡ್ಡೆ, ಅಮ್ಮುಂಜೆ ಯಲ್ಲಿ ಬಿಎಸ್ ಎನ್ ಎಲ್ ಇದರ ಸಿಗ್ನಲ್ ಸಿಗದೇ ಗ್ರಾಹಕರು ಇಲಾಖೆಗೆ ಹಿಡಿಶಾಪ ಹಾಕುವಂತಾಗಿದೆ.

ಇಲ್ಲಿಯ ಗ್ರಾಮೀಣ ಭಾಗದ ಜನರಿಗೆ ಬಿಎಸ್ ಎನ್ ಎಲ್ ಇದರ ಟವರ್ ಅಗತ್ಯತೆ ಇದೆ ಎಂದು ಈಗಾಗಲೇ ಮಂಗಳೂರಿನ ಪ್ರಧಾನ ಕಚೇರಿಗೂ ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಆದ್ದರಿಂದ ಈ ಗ್ರಾಮೀನ ಭಾಗದ ಜನರ ಬಹು ದಿನಗಳ ಬೇಡಿಕೆಯಾದ ಬಿಎಸ್ ಎನ್ ಎಲ್ ಟವರ್ ನ್ನು ಅವಸ್ಯವಾಗಿ ಸ್ಥಾಪಿಸುವಂತೆ ಗ್ರಾಮದ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.ಬಿಎಸೆನ್ ಎಲ್ ಕಂಪೆನಿಯು ಗ್ರಾಹಕರ ಮನವಿಗೆ ಪೂರಕವಾಗಿ ಸ್ಪಂದಿಸುತ್ತದೆ ಎಂದು ಗ್ರಾಮಸ್ಥರ ನಂಬಿಕೆ.

By suddi9

Leave a Reply

Your email address will not be published. Required fields are marked *