ಕೈಕಂಬ: ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷನಾಟ್ಯ ಕಲಾಕೇಂದ್ರ ತಕಧಿಮಿ ತಂಡ ದ ವಿದ್ಯಾರ್ಥಿಗಳಿಂದ ಪ್ರಥಮ ವಾರ್ಷಿಕೋತ್ಸವ ಹಾಗೂ ತಂಡದ ಕಲಾವಿದರಿಂದ ರಂಗಪ್ರವೇಶ ಯಕ್ಷಗುರು ನಾಟ್ಯ ಮಯೂರಿ ರಕ್ಷಿತ್ ಶೆಟ್ಟಪಡ್ರೆ ಅವರ ನಿರ್ದೇಶನದಲ್ಲಿ ಸೆ.22ರಂದು ಶನಿವಾರ ಸುಬ್ರಹ್ಮಣ್ಯ ಕಲಾ ಆಟ್ರ್ಸ್ ಗುರುಪುರ ಕೈಕಂಬ ಗಣೇಶ್ ಕಟ್ಟೆಯ ಬಳಿ ನಡೆಯಲಿದೆ.
ಸಂಜೆ 5.30 ರಿಂದ ತಕಧಿಮಿ ತಂಡದ ವಿದ್ಯಾರ್ಥಿಗಳಿಂದಯಕ್ಷಗಾನ “ಪೂರ್ವರಂಗ” ಸಂಜೆ 6.30ರಿಂದ ಸಭಾ ಕಾರ್ಯಕ್ರಮ ಉದ್ಘಾಟನೆ,ಸನ್ಮಾನ, ಗುರುವಂದನೆ, ಗೌರವಾರ್ಪಣೆ ಮತ್ತು ನಿಧಿ ಸಮರ್ಪಣೆ. ರಾತ್ರಿ 8.15 ರಿಂದ ತಕಧಿಮಿ ತಂಡದ ವಿದ್ಯಾರ್ಥಿಗಳಿಂದ “ಶ್ರೀ ಹರಿ” “ಶ್ರೀ ರಾಮ” “ಶ್ರೀ ಕೃಷ್ಣ” ಯಕ್ಷಗಾನ ಬಯಲಾಟ ನಡೆಯಲಿದೆ.
ಸಭಾ ಕಾರ್ಯಕ್ರಮ:
ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿ ಆಶೀರ್ವಚನ ನೀಡಲಿದ್ದಾರೆ. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅ ಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ.ಕಾರ್ಯಕ್ರಮದ ಉದ್ಘಾಟನೆಯನ್ನು ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಧನ್ ಪಾಲ್ ಹೆಚ್. ಶೆಟ್ಟಿಗಾರ್, ಭೋಜರಾಜ್ ವಾಮಂಜೂರು, ಚಂದ್ರಹಾಸ ಶೆಟ್ಟಿ ನಾರಳ, ಸುರೇಶ್ ಕೆ.ಪಿ, ಪುಷ್ಪ ಎಸ್ ಕರ್ಕೆರ ಗಂಜಿಮಠ, ಆನೆಟ್ ಡಿಸೋಜ ಭಗವಹಿಸಲಿದ್ದಾರೆ.
*ಗೌರವ ಉಪಸ್ಥಿತಿ
ಹೋಟೇಲ್ ಶ್ರೀ ರಾಮ್ ಮಾಲಕ ಹರಿರಾವ್, ಶ್ರೀಪತಿ ಕಿನ್ನಿಕಂಬಳ, ವಿನೋದ್ ಮಾಡ, ಶ್ರೀಧರ ರಾವ್, ರಾಜೀವ ಕೆ,ಉಮೇಶ್ ಆರ್ ಭಂಡಾರಿ, ಜಯರಾಮ್ ಶೆಟ್ಟಿ ಉಪಸ್ಥಿತರಿರುವರು.
*ಗುರುವಂದನೆ:
ತಕಧಿಮಿ ತಂಡದ ನಿದೇಶಕ ರಕ್ಷಿತ್ ಶೆಟ್ಟಿ ಪಡ್ರೆ
*ಗೌರವಾರ್ಪಣೆ ಮತ್ತು ನಿಧಿ ಸಮರ್ಪಣೆ:
ಅಶಕ್ತ ಸಮಾಜಕ್ಕೆ ಬೆನ್ನೆಲುಬಾಗಿ ನಿಂತಿರುವಸಂಸ್ಥೆ ಅಮೃತ ಸಂಜೀವಿನಿ ಮಂಗಳೂರು.
* ಸನ್ಮಾನ:
ಶಿವಣ್ಣ ಆಚಾರ್ಯ ಕುರ್ನಾಡು ಹಿರಿಯ ಯಕ್ಷಗಾನ ಹಾಗೂ ಪ್ರಸಾದನ ಕಲಾವಿದ.
*ಗೌರವಾರ್ಪಣೆ:
ಕೋಟ್ಯಪ್ಪ ಪೂಜಾರಿ ಬಡಕಬೈಲು ಹಿರಿಯ ಯಕ್ಷಗಾನ ವಸ್ತ್ರವಿನ್ಯಾಸಗಾರ
ಕಾರ್ಯಕ್ರಮವನ್ನು ಜನಾರ್ಧನ ಅಮ್ಮುಂಜೆ ಹಾಗೂ ಮಾಧವ ಬಂಗೇರಾ ಕೊಳತ್ತಮಜಲು ನಿರೂಪಿಸಲಿದ್ದಾರೆ. ಎಂದು ಸಂಸ್ಥೆಯ ಪ್ರಧಾನ ಸಂಚಾಲಕ ಪುಷ್ಪರಾಜ್ ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
