ಬಂಟ್ವಾಳ: ಇತ್ತೀಚೆಗೆ ಪ್ರಕೃತಿ ವಿಕೋಪದಿಂದ ತತ್ತರಗೊಂಡ ಕೊಡಗು ಜಿಲ್ಲಾ ನೆರೆ ಸಂತ್ರಸ್ತರ ನೆರವಿಗೆ ಸೇವಾ ಭಾರತಿ ಮೂಲಕ ನಿಧಿ ಸಮರ್ಪಿಸಲು ಇದೇ 22ರಂದು ಸಂಜೆ ಗಂಟೆ 5.30ರಿಂದ 8.30ರತನಕ ತುಳು ‘ಯಕ್ಷ ಹಾಸ್ಯ ವೈಭವ’ ಎಂಬ ಉಚಿತ ಕಾರ್ಯಕ್ರಮ ಇಲ್ಲಿನ ಸ್ಪರ್ಶಾ  ಕಲಾ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ, ತಂಡದ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಹೇಳಿದ್ದಾರೆ.
ಗುರುವಾರ ಸಂಜೆ ಬಿ.ಸಿ.ರೋಡಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ಚಿತ್ರನಟ ಅರವಿಂದ ಬೋಳಾರ್ ಸಹಿತ ಎಲ್ಲಾ 10 ಮಂದಿ ವೃತ್ತಿ ಕಲಾವಿದರು ಉಚಿತವಾಗಿ ಭಾಗವಹಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ದಾನಿಗಳು ನೀಡುವ ದೇಣಿಗೆ ಸ್ವೀಕರಿಸಿ ಅದೇ ದಿನ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಸೇವಾ ಭಾರತಿಗೆ ಹಸ್ತಾಂತರಿಸಲಾಗುತ್ತದೆ ಎಂದು ಅವರು ವಿವರಿಸಿದರು. ಹಾಸ್ಯ ಕಲಾವಿದ ಕೋಡಪದವು ದಿನೇಶ ಕುಮಾರ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *