ವಿಟ್ಲ: ರೋಟರಿ ಕ್ಲಬ್ ವತಿಯಿಂದ ಮೂಲ ಶಿಕ್ಷಣ ಮತ್ತು ಸಾಕ್ಷರತೆ ಕಾರ್ಯಕ್ರಮದ ಅಂಗವಾಗಿ ರೋಟರ್ಯಾಕ್ಟ್ ಮತ್ತು ಇಂಟರ್ಯಾಕ್ಟ್ ಕ್ಲಬ್ ಸದಸ್ಯರಿಗೆ ಭಾಷಣ ಸ್ಪರ್ಧೆಯನ್ನು ವಿಠಲ ಪ್ರೌಢ ಶಾಲೆಯಲ್ಲಿ ಸೆ.14 ಶುಕ್ರವಾರದಂದು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಡಾ| ಚರಣ್ ಕಜೆ ವಹಿಸಿದ್ದರು.

bhashana spardhe
ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷ ಸಂಜೀವ ಪೂಜಾರಿ ಮತ್ತು ಸದಸ್ಯ ಡಾ| ವಿ ಕೆ ಹೆಗ್ಡೆ, ಸದಸ್ಯರಾದ ವಸಂತ ಶೆಟ್ಟಿ, ಹರೀಶ್, ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಶಿಕ್ಷಕಿ ಸೀತಾಲಕ್ಷ್ಮಿ ವರ್ಮ, ಶಿಕ್ಷಕ ರಮೇಶ್ ಬಿ ಕೆ, ರೋಟರಿ ಕ್ಲಬ್ ಸದಸ್ಯರುಗಳಾದ ಮೋಹನ ಮೈರ ಮತ್ತು ಭಾಸ್ಕರ ಶೆಟ್ಟಿ ಕಾರ್ಯಕ್ರಮಕ್ಕೆ ಸಹಕರಿಸಿದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಪ್ರಸ್ತಾವಿಸಿ ಸ್ವಾಗತಿಸಿದರು. ಉಪನ್ಯಾಸಕ ಪ್ರಕಾಶ್ ನಾಯಕ್ ವಂದಿಸಿದರು. ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *