ಮುಲ್ಲರಪಟ್ನಾ: ಸೇತುವೆ ಕುಸಿತ ಇದರ ಪುನರ್ನಿರ್ಮಾಣ ಕಾರ್ಯ ಆರಂಭಿಸುವ ಬಗ್ಗೆ ಸ್ಥಳವನ್ನು ಪರಿಶೀಲಿಸಲು ಮಾನ್ಯ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಶಿಪಾರಸ್ಸಿನ ಮೇರೆಗೆ ಐ.ಎಂ.ಸಿ.ಟಿ ತಂಡ ಭೇಟಿ ನೀಡಿತು.
ತಂಡದಲ್ಲಿ ಆರ್ಥಿಕ ಸಚಿವಾಲಯದ ಉಪಕಾರ್ಯದರ್ಶಿ ಭರತೇಂದ್ರ ಕುಮಾರ್ ಸಿಂಗ್ , ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್, ಸಂಪರ್ಕ ಮತ್ತು ರಾ.ಹೆ .ಯ ಪ್ರಾದೇಶಿಕ ವಿಭಾಗದ ಸದಾನಂದ ಬಾಬೂ ಸ್ಥಳ ಪರಿಶೀಲಿಸಿ ಪುನರ್ನಿರ್ಮಾಣದ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ ಸಸಿಕಾಂತ್ ಸೆಂಥಿಲ್ ಸಂಪೂರ್ಣ ವಿವರವನ್ನು ಐ.ಎಂ.ಸಿ.ಟಿ ತಂಡಕ್ಕೆ ನೀಡಿದರು. ಜಿಲ್ಲಾಧಿಕಾರಿ ಕುಮಾರ್,
ಲೋಕೋಪಯೋಗಿ ಇಲಾಖೆಯ ಎಲ್ಲಾ ಅಧಿಕಾರಿಗಳು,ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರೋಹಿಣಿ, ಬಂಟ್ವಾಳ ತಹಶಿಲ್ದಾರ್ ಪುರಂದರ ಹೆಗ್ಡೆ, ಜಿಲ್ಲೆಯ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಅರಳ ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಬಿ.ಅಶ್ರಪ್,ಬಡಗ ಬೆಳ್ಳೂರು ಗ್ರಾ.ಪ ಸದಸ್ಯರಾದ ಹಾಜಬ್ಬ,ಮುತ್ತೂರು ಗ್ರಾ.ಪ ಸದಸ್ಯರಾದ ಪ್ರವೀಣ್ ಆಳ್ವ ಕೂಳವೂರು ಉಪಸ್ಥಿತಿಯಿದ್ದರು..

