ಬಂಟ್ವಾಳ: ಹಿಂದೂ ಧರ್ಮದ ಧಾರ್ಮಿಕ ಆಚರಣೆಯಲ್ಲಿ ಒಂದು ಗಣೇಶೋತ್ಸವಕ್ಕೆ ನಿರ್ಬಂಧ, ನಿಷೇಧ ಹಾಗೂ ಹಿಂದೂಗಳ ಧಾರ್ಮಿಕ ಹಕ್ಕಿನ ಮೇಲೆ ದಬ್ಬಾಳಿಕೆ ಯನ್ನು ಖಂಡಿಸಿ ಮತ್ತು ಶ್ರೀ ಗಣೇಶೋತ್ಸವಕ್ಕೆ ವಿಧಿಸಿರುವ ಜಾರಿಗೊಳಿಸಿದ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಹಿಂದೂ ಜಾಗರಣಾ ವೇದಿಕೆ ಘಟಕ ತಹಶಿಲ್ದಾರರ ಮೂಲಕ ಮುಖ್ಯ ಮಂತ್ರಿಗೆ ಮಾನವಿ ಸಲ್ಲಿಸಲಾಯಿತು.

ganeshthsava btl (2)
ಎಡಿಜಿಬಿ ಅದೇಶವನ್ನು ಹಿಂದೂ ಜಾಗರಣಾ ವೇದಿಕೆ ಖಂಡಿಸುತ್ತದೆ . ಹಿಂದೂ ವಿರೋಧಿ ಅಧಿಕಾರ ಶಾಹಿಗಳು ಈ ಹಬ್ಬವನ್ನು ಹತ್ತಿಕ್ಕಲು ಇಲ್ಲಸಲ್ಲದ ಅಡಚಣೆಗಳನ್ನು ಹೇರುತ್ತಿದ್ದು ರಾಜ್ಯದ ಎಡಿಜಿಬಿ ರಾಷ್ಟ್ರೀಯ ಹಿಂದೂ ಹಬ್ಬದ ವೈಭವವನ್ನು ಹಾಳು ಮಾಡಲು ಹೊರಟಿರುವುದು ಖಂಡನೀಯ .ವಿಧಿಸಿ ರುವ ಎಲ್ಲಾ ನಿರ್ಬಂಧ ಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಅಮೂಲಕ ಸಾರ್ವಜನಿಕ ಗಣೇಶೋತ್ಸವ ದ ಮೆರವಣಿಗೆಗೆ ಮುಕ್ತ ಅವಕಾಶವನ್ನು ಕಲ್ಪಿಸಬೇಕು ಎಂದು ಮನವಿಯ ಮೂಲಕ ಒತ್ತಾಯಿಸಿ ದರು.

ganeshthsava btl (1)
ಈ ಸಂಧರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಜಿಲ್ಲಾ ಅಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ತಾಲೂಕು ಅದ್ಯಕ್ಷ ಚಂದ್ರ ಕಲಾಯಿ,ಮಹಿಳಾ ಘಟಕದ ಅದ್ಯಕ್ಷೆ ಬಬಿತಾ ಕೋಟ್ಯಾನ್, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಮಾಜಿ ತಾ.ಪಂ.ಉಪಾಧ್ಯಕ್ಷ ದಿನೇಶ್ ಅಮ್ಟೂರು, ಪ್ರಮುಖರಾದ ಶರಣ್ ಕಾಮಾಜೆ, ಬಾಲಕ್ರಷ್ಣ ಕಲಾಯಿ, ಮಚ್ವೇಂದ್ರನಾಥ ಸಾಲಿಯಾನ್, ಗಣೇಶ್ ಶೆಟ್ಟಿ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *