ಕಾಸರಗೋಡು: ಎ.ಯು.ಪಿ,ಶಾಲೆ ಪಳ್ಳತ್ತಡ್ಕದ ಮಕ್ಕಳು ಆಟಿಕಳಂಜನ ಕುಣಿತ ನೋಡಿ ಸಂಭ್ರಮ ಪಟ್ಟರು. ಆಟಿ ತಿಂಗಳ ಲ್ಲಿ ಉಂಟಾಗುವ ಕಷ್ಟಗಳ ನಿವಾರಣೆಗೆ ಆಟಿಕಳಂಜ ಮನೆ ಮನೆ ತೆರಳಿ ಕುಣಿದು ಅಲ್ಲಿಂದ ನೀಡುವ ಕಾಣಿಕೆಯನ್ನು ಸ್ವೀಕರಿಸಿ ಸಂತಸದಿಂದ ಮರಳುವುದು ವಾಡಿಕೆಯಾಗಿದೆ.
ಶಾಲಾ ಅಧ್ಯಾಪಕರ ಕರೆಯ ಮೇರೆಗೆ ಬಂದು ಮಕ್ಕಳ ಎದುರು ಹಾಡಿನ ತಾಳಕ್ಕೆ ತಕ್ಕಂತೆ ಕುಣಿದಾಗ ಮಕ್ಕಳ ಉತ್ಸಾಹ , ಸಂತೋಷಕ್ಕೆ ಪಾರವೇ ಇರಲಿಲ್ಲ. ಮಕ್ಕಳ ಸಂಶಯಕ್ಕೆ ಪೂರಕ ಉತ್ತರ ನೀಡಿ ಸಂತಸದಿಂದ ಆಟಿಕಳಂಜ ಹಾಗೂ ಜತೆಗಾರ ಮುಂದಿನ ದಾರಿ ಹಿಡಿದು ಸಾಗಿದಾಗ ಮಕ್ಕಳ ಮನದಲ್ಲಿ ಆಟಿಕಳಂಜನ ಬಗ್ಗೆ ತಿಳಿದುಕೊಳ್ಳಲು ಸುಲಭವಾಯಿತು.


