ನ್ಯೂಯಾರ್ಕ್: ಕೇವಲ ಎರಡೇ ಎರಡು ಗಂಟೆ ಸೋಷಿಯಲ್ ಮೀಡಿಯಾದ ದೊರೆ ಜುಕರ್‍ಬರ್ಗ್ ಷೇರುಪೇಟೆಯಲ್ಲಿ ಕಳೆದುಕೊಂಡಿದ್ದು ಕೇವಲ 1ಲಕ್ಷ 16 ಸಾವಿರದ 64 ಕೋಟಿ ರೂಪಾಯಿ ಎಂದು ಮಾಹಿತಿ ಲಭ್ಯವಾಗಿದೆ.

ಕಂಪೆನಿಯ ಮುಖ್ಯ ಹಣಕಾಸು ಕಾರ್ಯನಿರ್ವಹಣಾಧಿಕಾರಿ ಡೆವಿಡ್ ವಾರ್ನರ್ ಎರಡನೇ ತ್ರೈಮಾಸಿಕ ವರದಿಯನ್ನು ಮಂಡಿಸಿದರು. ವರದಿ ಮಂಡನೆಯಲ್ಲಿ ನ್ಯೂಯಾರ್ಕ್ ಷೇರುಮಾರುಕಟ್ಟೆಯಲ್ಲಿ ಫೇಸ್‍ಬುಕ್ ಷೇರುಗಳ ಬೆಲೆಯಲ್ಲಿ ಶೇ.20ರಷ್ಟು ಕಡಿಮೆಯಾಗಿದೆ. ಶ್ರೀಮಂತರ ಲಿಸ್ಟ್‍ನಲ್ಲಿ ಕುಸಿತ ಕಂಡ ಜೂಕರ್‍ಬರ್ಗ್, ಬ್ಲೂಮ್ ಬರ್ಗ್ ಬಿಲೇನಿಯರ್ ಇಂಡೆಕ್ಸ್‍ನಲ್ಲಿ ಮೂರನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಇಳಿದಿದ್ದಾರೆ.
