ಸೌದಂರ್ಯ ಎನ್ನುವುದು ಪ್ರತಿಯೊಬ್ಬರು ಪಡೆದುಕೊಂಡು ಬಂದಿರುವ ವರ. ಆದರೆ ಈ ಸೌಂದರ್ಯಕ್ಕಾಗಿ ಪೈಪೋಟಿ ನಡೆಯುವುದನ್ನು ಕಾಣುತ್ತೇವೆ. ಮೊದಲು ಈ ಸೌಂದರ್ಯಕ್ಕೂ ವರ್ಣಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಕೇವಲ ಬೆಳ್ಳಗಿನ ಚರ್ಮ ಹೊಂದಿರುವವರು ಮಾತ್ರ ಸೌಂದರ್ಯವಂತರೂ ಎಂಬ ಕಾಲವೂ ಇತ್ತು. ವರ್ಣಕ್ಕಾಗಿ ಮಾಡುತ್ತಿದ್ದ ತಾರತಮ್ಯದ ಅದೆಷ್ಟೋ ನಿದರ್ಶನಗಳು ನಮ್ಮ ಮುಂದೆ ಹಾದುಹೋಗಿದೆ.

ನಂತರದ ದಿನಗಳಲ್ಲಿ ಮಾಡೆಲಿಂಗ್ ಹಾಗೂ ಸಿನಿ ಕ್ಷೇತ್ರದಲ್ಲಿ ವರ್ಣಬೇಧವಿಲ್ಲದೆ ಸೌಂದರ್ಯಕ್ಕೆ ಮಹತ್ವ ಕೊಡಲು ಆರಂಭವಾಯಿತು. ಅಂತೆಯೇ ನಮ್ಮ ಬಾಲಿವುಡ್ ನಿಸಿ ಕ್ಷೇತ್ರದಲ್ಲಿ ಮಿಂಚಿದ ಬಿಪಾಶಾಬಸು ತಾನು ಕಪ್ಪು ಸುಂದರಿ ಎಂಬ ಬಿರುದು ಪಡೆದುಕೊಂಡಿದ್ದಾರೆ.
ಆದರೆ ಸದ್ಯಕ್ಕೆ ಸದ್ದು ಮಾಡುತ್ತಿರುವ ಬಾಲಕಿ ಜಾರ ಜಲಾನ. ನೈಜೀರಿಯಾ ಮೂಲದ ಐದು ವರ್ಷದ ಈ ಬಾಲಕಿ ತನ್ನ ಮುಗ್ಧ ಮುಖದಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಈಕೆ ವಿಶ್ವದ ದಿ ಮೋಸ್ಟ್ ಬ್ಯೂಟಿಫುಲ್ ಗರ್ಲ್ ಎಂಬ ಹೆಗ್ಗಳಿಕೆಗೂ ಪಾತ್ರಳಾಗಿದ್ದಾಳೆ.

ಛಾಯಾಗ್ರಾಹಕಿ ಮೋಫೆ ಬಮುಹಿವ, ಬಾಲಕಿ ಜಾರ ಜಲಾನಳ ಈ ಫೋಟೋಗಳನ್ನು ಸೆರೆ ಹಿಡಿದಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಂ ಹಾಗೂ ಟ್ವೀಟರ್‍ನಲ್ಲಿ ಶೇರ್ ಮಾಡಿದ್ದಾರೆ. ಬೊಂಬೆಯಂತೆ ಕಾಣುವ ಈಕೆಯ ಫೋಟೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಮುಗ್ಧತೆಯನ್ನು ಸೂಚಿಸುವ ಬಾಲಕಿಯ ಆಕರ್ಷಕ ಕಣ್ಣುಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ. ಸಾವಿರಾರು ಜನ ಫೋಟೋಗಳನ್ನು ಲೈಕ್ ಹಾಗೂ ಶೇರ್ ಮಾಡಿದ್ದಾರೆ. 2010ರಿಂದ ‘ಮೋಸ್ಟ್ ಬ್ಯೂಟಿಫುಲ್ ಗರ್ಲ್ ಇನ್ ದ ವಲ್ರ್ಡ್’ ಗುರುತಿಸುವ ಕಾರ್ಯ ನಡೆದಿದ್ದು, ಜಾರಾ ಜಲಾನ ಈ ಗೌರವಕ್ಕೆ ಪಾತ್ರಳಾಗಿದ್ದಾಳೆ.
