ಕಿನ್ನಿಗೋಳಿ: ಕೊಲ್ಲೂರು ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿಯನ್ನು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಬೆಯನ್ನು ಪ್ರದರ್ಶಿಸಲು ಉತ್ತಮ ಸರಿಯಾದ ವೇದಿಕೆಯಾಗಿದೆ, ಶಿಕ್ಷಕರು ಮತ್ತು ಪೋಷಕರು ಮಕ್ಕಳ ಪ್ರತಿಭೆಗಳನ್ನು ಗುರುತಿಸಿಪ್ರೋತ್ಸಾಹಿಸಿದಾಗ ಮಕ್ಕಳಿಗೆ ಗುರಿ ಮುಟ್ಟಲು ಸಾದ್ಯ ಎಂದು ಉಮಾನಾಥ ಕೋಟ್ಯಾನ್ ಹೇಳಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೋಳ್ಳೂರು ತಾಲೂಕು ಪಂಚಾಯತ್ ಸದಸ್ಯೆ ರಶ್ಮೀ ಆಚಾರ್ಯ, ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪುತ್ರನ್, ಸದಸ್ಯರಾದ ನವೀನ್, ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರೇಮಾ ನಾಯ್ಕ್, ಆನಂದ್ ಕೊಲ್ಲೂರು, ಗೀತಾ ನಾಯ್ಕ್, ವಿನೋದ, ಐತಪ್ಪ ಸಾಲಿಯನ್, ಡಾ. ಶೋಭಾ ರಾಣಿ, ಉಮೇಶ್ ನಾಯ್ಕ್, ಸಿ.ಆರ್ ಪಿ ರಾಮದಾಸ್ ಭಟ್ ಪ್ರಸ್ತಾವನೆಗೈದರು. ಚಿತ್ರಾಕ್ಷಿ ಸ್ವಾಗತಿಸಿದರು. ಸುನಿತಾ ಧನ್ಯವಾದ ಸಮರ್ಪಿಸಿದರು, ಸುಕುಮಾರ್ ಭಟ್ ನಿರೂಪಿಸಿದರು.

