ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್, ಬಂಟ್ವಾಳ ಸಂಚಾರ ಪೋಲೀಸ್ ಠಾಣೆ ಮತ್ತು ಎನ್.ಸಿ.ಸಿ. ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಎಸ್.ವಿ.ಎಸ್.ಇವರ ಸಂಯುಕ್ತ ಆಶ್ರಯದಲ್ಲಿ ಸಂಚಾರ ನಿಯಂತ್ರಣ ಹಾಗೂ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಬಂಟ್ವಾಳ ಎಸ್.ವಿ.ಎಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ನಿಯಂತ್ರಣ ,ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.

info abt accident (2)

ಮುಖ್ಯ ಅತಿಥಿ ಅಡಿಶನಲ್ ಎಸ್ .ಪಿ.ಸಜಿತ್ ಮಾತನಾಡಿ ದೇಶದಲ್ಲಿ ಅತೀ ಹೆಚ್ಚು ಮರಣ ಹೊಂದುವುದು ರಸ್ತೆ ಅಪಘಾತ ದಲ್ಲಿ ಎಂದು ವರದಿ ಯಾಗಿದೆ. ಈ ಹಿನ್ನೆಲೆಯಲ್ಲಿ ಅಪಘಾತ ಗಳನ್ನು ತಡೆಯುವುದು ಹಾಗೂ ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗುತ್ತಿದೆ. ಶಿಕ್ಷಿತ ವರ್ಗಗಳ ಮೂಲಕ ಮಾಹಿತಿ ನೀಡಿದಾಗ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ ಎನ್ನುವ ಯೋಚನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಅಯೋಜಿಸಲಾಗಿದೆ.

info abt accident (1)

ರಸ್ತೆಯಲ್ಲಿ ಸಂಚರಿಸುವಾಗ ಸುರಕ್ಷತೆಯ ಬಗ್ಗೆ ಬೇಕಾದ ಎಲ್ಲಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಅವರು ಕರೆ ನೀಡಿದರು. ಕಾನೂನು ಅರಿವುಗಳನ್ನು ಪಡೆದುಕೊಳ್ಳಿ ಅಮೂಲಕ ಸಮಾಜದಲ್ಲಿ ಗೌರವದ ಬದುಕು ಸಾಗಿಸಿ ಎಂದರು.
ಸಂಪನ್ಮೂಲ ವ್ಯಕ್ತಿ ಯಾಗಿ ಸಂಚಾರಿ ಪೋಲೀಸ್ ಎಸ್.ಐ. ಯಲ್ಲಪ್ಪ ಮಾತನಾಡಿ,  ರಸ್ತೆ ನಿಯಮಗಳನ್ನು ಪ್ರತಿಯೊಬ್ಬರು ಬಳಸಿ, ಗುಣಮಟ್ಟದ ಹೆಲ್ಮೆಟ್ ಗಳನ್ನು ಬಳಸಿ, ಯಾವ ನಿಯಮಗಳು ಅಥವಾ ಕಾನೂನು ಗಳಾಗಲಿ ಅದು ಪರಣಾಮಕಾರಿಯಾಗಲು ಸ್ವಯಂ ಜಾಗ್ರತಿಯಿಂದ ಮಾತ್ರ ಸಾಧ್ಯ.ಬದಲಾವಣೆಗಳನ್ನು ಸ್ವಯಂ ಜಾಗ್ರತಿಯ ಮೂಲಕ ಅಳವಡಿಸಿ ಎಂದು  ಹೇಳಿದರು.

info abt accident (3)
ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಅಪರಾಧ ವಿಭಾಗದ ಎಸ್ ಐ ಹರೀಶ್ ಯೋಜನಾಧಿಕಾರಿ ಕಿಟ್ಟು ರಾಮಕುಂಜ, ಎನ್.ಸಿ.ಸಿ.ಅಧಿಕಾರಿ ಸುಂದರ್ ಉಪಸ್ಥಿತರಿದ್ದರು. ಡಾ ಮಂಜುನಾಥ ಉಡುಪ ಸ್ವಾಗತಿಸಿ , ಎನ್.ಸಿ.ಸಿ.ಅಧಿಕಾರಿ ಸುಂದರ್ ವಂದಿಸಿದರು.

By Suddi9

Leave a Reply

Your email address will not be published. Required fields are marked *