ಟೋಕಿಯೋ: ಉಭಯ ದೇಶಗಳ ಮುಂದಿನ ಅಭಿವೃದ್ಧಿಗೆ ಮುನ್ನುಡಿ ಬರೆಯೋಣ, ದೇಶದೇಶಗಳ ಮಧ್ಯೆ ಬಾಂಧವ್ಯ ಬೆಸೆಯೋಣ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
modi2
modi
ಐದು ದಿನಗಳ ಜಪಾನ್ ಪ್ರವಾಸದ ಮೂರನೇ ದಿನವಾದ ಸೋಮವಾರ ಮೋದಿ ಜಪಾನ್ ಛೇಂಬರ್ ಆಫ್ ಕಾಮರ್ಸ್ ಉದ್ದೇಶಿಸಿ ಮಾತನಾಡಿದ ಅವರು, ಉಭಯ ದೇಶಗಳು ಆರ್ಥಿಕ ಅಭಿವೃದ್ಧಿಗೆ ದುಡಿಯಬೇಕಾಗಿದೆ. ಇದಕ್ಕಾಗಿ ಭಾರತ ಸಹಕರಿಸಲಿದೆ ಎಂದು ತಿಳಿಸಿದ್ದಾರೆ. ಪೂರಕ ವಾತಾವಣ ನಿರ್ಮಾಣಕ್ಕೆ ಭಾರತ ಬದ್ಧ ವಾಗಿದೆ ಎಂದ ಅವರು, ಜಪಾನ್ ಜೊತೆ ಕೆಲಸ ಮಾಡುವುದು ಸಂತಸ ತಂದಿದೆ. ಜಪಾನ್ ತಂತ್ರಜ್ಞಾನವನ್ನು ನಾವು ಸಾಕಷ್ಟು ಕ್ಷೇತ್ರಗಳಲ್ಲಿ ಅಳವಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಜಪಾನ್ ಜೊತೆ ಸೇರಿ ಸಿಎಂ ಆಗಿದ್ದಾಗ ಕೆಲಸ ಮಾಡಿದ್ದೇನೆ. ಭಾರತದಲ್ಲಿ ನಮ್ಮ ಸರ್ಕಾರ ಬಂದು ಮೂರು ತಿಗಂಳಾಯಿತು. ಇಷ್ಟರಲ್ಲಿ ಜಿಡಿಪಿ ಶೇ. 5.7ರಷ್ಟು ಅಭಿವೃದ್ಧಿಯಾಗಿದೆ. ಹಾಗಾಗಿ, ಜಪಾನ್ ಜೊತೆ ಕೈಜೋಡಿಸಿದರೆ, ಉಭಯ ದೇಶಗಳ ಆರ್ಥಿಕ ಅಭಿವೃದ್ಧಿ ಹೆಚ್ಚಲಿದೆ ಎಂದು ಮೋದಿ ತಿಳಿಸಿದ್ದಾರೆ. ಸಭೆಯಲ್ಲಿ ಜಪಾನ್‌ನ ಪ್ರಮುಖ ಉದ್ಯಮಿಗಳು, ಅಧಿಕಾರಿಗಳು ಭಾಗಿಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *