ಬಂಟ್ವಾಳ:ತಾಲ್ಲೂಕಿನ ಹೃದಯ ಭಾಗದಂತಿರುವ ಬಿ.ಸಿ.ರೋಡ್ ಪೇಟೆಯಲ್ಲಿ ಇರುವ ಎಲ್ಲಾ ಅನಧಿಕೃತ ವಾಹನ ಪಾರ್ಕಿಂಗ್ಗನ್ನು ಕೂಡಲೇ ತೆರವುಗೊಳಿಸುವಂತೆ ವಕೀಲ ರಾಜಾರಾಮ ನಾಯಕ್ ಆಗ್ರಹಿಸಿದ್ದಾರೆ.

ಬಿ.ಸಿ.ರೋಡ್ ತಾಲ್ಲೂಕು ಕಛೇರಿ ಎದುರು ರಸ್ತೆಯುದ್ದಕ್ಕೂ ವಿವಿಧ ಖಾಸಗಿ ಮತ್ತು ಟೂರಿಸ್ಟ್ ವಾಹನಗಳು ಪಾರ್ಕಿಂಗ್ ಮಾಡುತ್ತಿದ್ದು, ಮೇಲ್ಸೇತುವೆ ಅಡಿಯಲ್ಲೂ ಪಾದಚಾರಿಗಳಿಗೆ ರಸ್ತೆ ದಾಟದಂತೆ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ.
ಇದರಿಂದಾಗಿ ಇಲ್ಲಿನ ತಾಲ್ಲೂಕು ಕಚೇರಿ ಮಾತ್ರವಲ್ಲದೆ ಸಿವಿಲ್ ನ್ಯಾಯಾಲಯ, ನಗರ ಪೊಲೀಸ್ ಠಾಣೆ, ಎಸ್ಬಿಐ ಮತ್ತು ಭೂ ಅಭಿವೃದ್ಧಿ ಬ್ಯಾಂಕ್, ಉಪ ನೋಂದಣಾಧಿಕಾರಿ ಕಚೇರಿ, ಅನ್ನಪೂರ್ಣೇ ಶ್ವರಿ ಮತ್ತು ರಕ್ತೇಶ್ವರಿ ದೇವಿ ದೇವಸ್ಥಾನ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಶಿಶು ಅಭಿವೃದ್ಧಿ ಇಲಾಖೆ, ಮೆಸ್ಕಾಂ ಉಪವಿಭಾಗ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಲು ಅಡ್ಡಿಯಾಗಿದೆ ಎಂದು ಅವರು ನಗರ ಪೊಲೀಸ್ ಠಾಣೆ ಮತ್ತು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.
