ಬಂಟ್ವಾಳ: ತಾಲ್ಲೂಕಿನ ರಾಯಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶನಿವಾರ ನಡೆದ ಧಾಮರ್ಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅರ್ಹ ಫಲಾನುಭವಿಗಳಿಗೆ ವಿವಿಧ ಬಗೆಯ ಸಸಿ ವಿತರಿಸಿದರು. ಸಮಿತಿ ಅಧ್ಯಕ್ಷ ಗೋಪಿನಾಥ ರೈ, ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ, ವಿ.ಎಂ.ಶಮಂತ್, ವೆಂಕಪ್ಪ ಗೌಡ ಸುಳ್ಯ, ಅನಂತಕೃಷ್ಣ ರಾವ್, ಅಬ್ದುಲ್ ಸತ್ತಾರ್ ಅರಳ, ಬಿ.ಕೆ.ಇದಿನಬ್ಬ, ಜಗದೀಶ ಕೊಯಿಲ, ರಾಮಚಂದ್ರ ಶೆಟ್ಟಿಗಾರ್ ಮತ್ತಿತರರು ಇದ್ದರು.

