ಬಂಟ್ವಾಳ: 5ನೇ ತರಗತಿಯ ವಿದ್ಯಾಥರ್ಿಯೋರ್ವನಿಗೆ ಮುಖ್ಯ ಶಿಕ್ಷಕಿ ಸಹಿತ ಇತರ ಕೆಲ ಶಿಕ್ಷಕರು ಕಿರುಕುಳ ನೀಡುತ್ತಿರುವ ವಿದ್ಯಾಮಾನವೊಂದು ಬಂಟ್ವಾಳ ತಾಲೂಕಿನ ವಗ್ಗ ನಿಕರ್ಾನದ ಸೈಂಟ್ ಥೋಮಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಮುಖ್ಯ ಶಿಕ್ಷಕಿ ಭಗಿನಿ ಮೀನಾ ಹಾಗೂ ಸಹ ಶಿಕ್ಷಕಿ ರೊಸ್ಲಿನ್ ಮೊರಾಸ್ ಈ ಆರೋಪಕ್ಕೆ ಒಳಗಾಗಿದ್ದು ಈ ಇಬ್ಬರೂ ಶಿಕ್ಷಕರ ವಿರುದ್ದ ವಿದ್ಯಾಥರ್ಿಯ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶನಿವಾರ ದೂರು ಸಲ್ಲಿಸಿದ್ದಾರೆ.

DSC_3845

DSC_3830

DSC_3839

DSC_3841
ಸೈಂಟ್ ಥೋಮಸ್ ಹಿರಿಯ ಪ್ರಾಥಮಿಕ ಶಾಲೆಯ 5 ನೇ ತರಗತಿ ವಿದ್ಯಾಥರ್ಿ ಮ್ಯಾಕ್ಲಿನ್ ಫ್ಲಾಯಿಡ್ ರೊಡ್ರಿಗಸ್ ವಿರುದ್ದ ಶಿಕ್ಷಕರು ವಿನಕಾರಣ ಹಗೆತನ ಸಾಧಿಸುತ್ತಿದ್ದು ದೈಹಿಕ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಅಪ್ರಾಪ್ತ ವಿದ್ಯಾಥರ್ಿಯನ್ನು ಧಾರಾಕಾರ ಮಳೆಯಲ್ಲಿ ನೆನೆಸುವುದು, ಬಿಸಿಲಲ್ಲಿ ನಿಲ್ಲಿಸುವುದು ಮೊದಲಾದ ಶಿಕ್ಷೆಯನ್ನು ಶಿಕ್ಷರು ನೀಡುತ್ತಿದಾರೆ, ಅಲ್ಲದೆ ಪದೇ ಪದೇ ವಿದ್ಯಾಥರ್ಿಯನ್ನು ಕಚೇರಿಗೆ ಕರೆಯಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಲಾಗಿದೆ. ಶಿಕ್ಷಕರ ನಿರಂತರವಾದ ಕಿರುಕುಳ ಹಾಗೂ ಶಿಕ್ಷೆಯಿಂದ ವಿದ್ಯಾಥರ್ಿ ಮಾನಸಿಕವಾಗಿ ಕಂಗೆಟ್ಟು ಹೋಗಿದ್ದಾನೆ. ವಿದ್ಯಾಥರ್ಿಯ ಈ ಸ್ಥಿತಿಯನ್ನು ಕಂಡು ಆತಂಕಗೊಂಡ ಪೋಷಕರು ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಿದಾಗ ವಿದ್ಯಾಥರ್ಿ ಮಾನಸಿಕವಾಗಿ ಜರ್ಜರಿತಕ್ಕೊಳಗಾಗಿರುವುದು ತಿಳಿದು ಬಂದಿದೆ.
ಶಾಲೆಯ ಅಭಿವೃದ್ದಿ ಮಂಡಳಿಯ ಸದಸ್ಯರೂ ಆಗಿರುವ ವಿದ್ಯಾಥರ್ಿಯ ತಂದೆ ಮೆಲ್ವಿನ್ ರೊಡ್ರಿಗಸ್ ಈ ಬಗ್ಗೆ ಶಿಕ್ಷಕರನ್ನು ಪ್ರಶ್ನಿಸಿದಾಗ ನಿರ್ಲಕ್ಷದ ಉತ್ತರ ನೀಡಿದ್ದಾರೆ. ಇದೇ ಶಿಕ್ಷಕರು ಇತರ ವಿದ್ಯಾಥರ್ಿಗಳಿಗೂ ದೈಹಿಕ ಶಿಕ್ಷೆ ನೀಡುತ್ತಿರುವ ಬಗ್ಗೆಯೂ ಆರೋಪ ಕೇಳಿ ಬಂದಿದ್ದು ಪೊಲೀಸ್ ಠಾಣೆ ಹಾಗೂ ಮಕ್ಕಳ ಹಕ್ಕು ಕೇಂದ್ರಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.

By suddi9

Leave a Reply

Your email address will not be published. Required fields are marked *